Monday, January 20, 2025

ಆಸ್ಪತ್ರೆ ಶವಗಾರದಲ್ಲಿ ತಂದೆ , ಮದುವೆ ಸಂಭ್ರಮದಲ್ಲಿ ಮಗಳು : ಏನಿದು ಹೃದಯಾವಿದ್ರಾವಕ ಘಟನೆ

ಚಿಕ್ಕಮಗಳೂರು : ಆಸ್ಪತ್ರೆಯ ಶವಗಾರದಲ್ಲಿ ತಂದೆಯ ಶವವಿದೆ ಎಂದು ತಿಳಿಯದ ಮಗಳು, ಮದುವೆಯಾಗಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು. ಸಂಭ್ರಮದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತರನ್ನು 45 ವರ್ಷದ ಚಂದ್ರು ಎಂದು ಗುರುತಿಸಲಾಗಿದೆ.

ಮೃತ ಚಂದ್ರು ಅವರ ಮಗಳು ದೀಕ್ಷಿತಾರ ಮದುವೆ ನಿಮಿತ್ತಾ ಚಂದ್ರು ತುಂಬಾ ಉತ್ಸಾಹದಿಂದ ಓಡಾಡುತ್ತಿದ್ದರು. ಇದೇ ಕಾರಣಕ್ಕೆ ನಿನ್ನೆ ಬೆಳಗ್ಗೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಚಂದ್ರು, ಅಲ್ಲಿಂದ ತರೀಕೆರೆಗೆ ವಾಪಸಾಗುವಾಗ ಅಪಘಾತದಲ್ಲಿ ಮೃತಪಟ್ಟಿದ್ದರು.

ಇದನ್ನೂ ಓದಿ : ಬ್ರಿಮ್ಸ್​ ಆಸ್ಪತ್ರೆ ಮಹಾ ಎಡವಟ್ಟು : ನವಜಾತ ಶಿಶುವಿನ ಮೂಳೆ ಮುರಿದ ವೈದ್ಯರು !

ಆದರೆ ಎಲ್ಲಿ ಅಪ್ಪ ಸತ್ತಿದ್ದಾರೆ ಎಂದು ತಿಳಿದರೆ ದೀಕ್ಷಿತಾ ಮದುವೆ ನಿಲ್ಲಿಸುತ್ತಾಳೋ ಎಂದು ಕುಟುಂಬಸ್ಥರು, ದೀಕ್ಷಿತಾ ತಂದೆ ಚಂದ್ರು ಮದುವೆ ಕಾರಣಕ್ಕೆ ಓಡಾಡಿ ಸುಸ್ತಾಗಿದ್ದಾರೆ. ಅದಕ್ಕೆ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿ ದೀಕ್ಷಿತಾಳ ಆರತಕ್ಷತೆ ಮತ್ತು ಮದುವೆ ಮಾಡಿದ್ದರು.

ಆದರೆ ಇಂದು ಮದುವೆ ಮುಗಿದ ನಂತರ ಯುವತಿಯ ತಂದೆ ಸಾವನ್ನಪ್ಪಿರುವ ವಿಷಯವನ್ನು ಯುವತಿ ಮತ್ತು ಆಕೆಯ ತಾಯಿಗೆ ತಿಳಿಸಿದ್ದು. ವಿಷಯ ತಿಳಿಯುತ್ತಿದ್ದಂತೆ ಮೃತ ಚಂದ್ರು ಅವರ ಪತ್ನಿ ಮತ್ತು ಮಗಳ ಆಕ್ರಂದನ ಮುಗಿಲು ಮುಟ್ಟಿದ್ದು. ಸಂಭ್ರಮವಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

RELATED ARTICLES

Related Articles

TRENDING ARTICLES