Monday, January 20, 2025

ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ : ಮೂವರು ಸ್ಥಳದಲ್ಲೆ ಸಾ*ವು !

ಕಲಬುರಗಿ : ಲಾರಿ ಮತ್ತು ಕಾರ್​ ನಡುವೆ ಭೀಕರ ಅಪಘಾತವಾಗಿದ್ದು. ಅಪಘಾತದ ಪರಿಣಾಮಕ್ಕೆ ಮೂವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.

ಕಲಬುರಗಿ ಜಿಲ್ಲೆಯ, ಚಿಂಚೋಳಿ ತಾಲ್ಲೂಕಿನ, ಮಗದಂಪುರ ಬಳಿ ಘಟನೆ ನಡೆದಿದ್ದು. ಬೀದರ್​ನಿಂದ ತೆಲಂಗಾಣದ ಧಾರೂರ್​ಗೆ ತೆರಳುತ್ತಿದ್ದ ಕಾರು ಮತ್ತು ತೆಲಂಗಾಣದಿಂದ‌ ಚಿಂಚೋಳಿ ಕಡೆ ಬರುತ್ತಿದ್ದ ಲಾರಿ ನಡುವೆ ಭೀಕರ ಅಪಘಾತವಾಗಿದ್ದು. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಮೃತರನ್ನು ಅವಿನಾಶ್( 24 ) ಅಭಿಷೇಕ್ (26) ಸಂಜೀವ್ (40) ಗುರುತಿಸಲಾಗಿದೆ.

ಇದನ್ನೂ ಓದಿ : ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ & ಕೊಲೆ ಕೇಸ್‌ : ಆರೋಪಿ ಸಂಜಯ್​ ರಾಯ್​ಗೆ ಜೀವಾವಿಧಿ ಶಿಕ್ಷೆ ಪ್ರಕಟ !

ಇನ್ನು ಮೂವರಿಗೆ ಗಂಭೀರ ಗಾಯವಾಗಿದ್ದು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸಂಬಂಧ ಕುಂಚಾವರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES