ಹೆಚ್.ಡಿ.ಕೋಟೆ : ಕೊರೊನಾ ಹಾವಳಿಯ ನಡುವೆ ಹೆಚ್.ಡಿ.ಕೋಟೆ ತಾಲೂಜಿನ ಅಳಲ ಹಳ್ಳಿ ಗ್ರಾಮಸ್ಥರಿಗೆ ಹುಲಿಗಳ ಭೀತಿ ಶುರುವಾಗಿದೆ.ಕಾಡಿನಿಂದ ನಾಡಿಗೆ ಬಂದ ಹುಲಿಗಳು ಕೊಟ್ಟಿಗೆಗೆ ನುಗ್ಗಿ ಎರಡು ಹಸುಗಳನ್ನ ಬಲಿ ಪಡೆದಿವೆ.ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಎರಡು ಹಸುಗಳನ್ನು ಬಲಿ ಪಡೆದಿರುವುದು ಗ್ರಾಮಸ್ಥರಿಗೆ ಭಯ ಹುಟ್ಟಿಸಿದೆ.ಆಳಲ ಹಳ್ಳಿ ಗ್ರಾಮದ ಕೃಷ್ಣ ಎಂಬುವರಿಗೆ ಸೇರಿದ ಹಸುಗಳು. ಘಟನೆ ನಡೆದ ಸ್ಥಳದಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದೆ.ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.ಗ್ರಾಮದ ಮಾರಿಗುಡಿ ಸಮೀಪದ ಪೊದೆಯಲ್ಲಿ ಹುಲಿ ಅಡಗಿ ಕುಳಿತಿವೆ ಎಂಬ ಶಂಕೆ ಹಿನ್ನಲೆ ಜೆಸಿಬಿ ಯಂತ್ರದ ಮೂಲಕ ಶೋಧನಾ ಕಾರ್ಯ ನಡೆಸುತ್ತಿದ್ದಾರೆ. ಹೆಡಿಯಾಲ ಅರಣ್ಯ ಇಲಾಖೆಯ ಆರ್ ಎಫ್ ಓ ಮಂಜುನಾಥ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಬೋನಿನ ಸಮೇತ ಸಮೇತ ಸ್ಥಳಕ್ಕೆ ಬಂದಿರುವ ಅರಣ್ಯ ಸಿಬ್ಬಂದಿಗಳು ಸೂಕ್ತ ಸ್ಥಳದಲ್ಲಿ ಇರಿಸಲು ಚಿಂತನೆ ನಡೆಸಿದ್ದಾರೆ.