ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿ ಅನೇಕ ರಾಬರಿಗಳು ನಡೆಯುತ್ತಿದ್ದು. ಮೈಸೂರಿನಲ್ಲಿ ಹಾಡಹಗಲೆ ಕಾರನ್ನು ಅಡ್ಡಗಟ್ಟಿದ ಕಿಡಿಗೇಡಿಗಳು ಹಣದ ಸಮೇತ, ಕಾರನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ.
ಹೌದು.. ಇತ್ತೀಚೆಗೆ ಹಾಡಹಗಲೆ ಬೀದರ್ನಲ್ಲಿ ಶೂಟೌಟ್ ಮಾಡಿ ಸುಮಾರು 87 ಲಕ್ಷ ಹಣವನ್ನು ದೋಚಿಕೊಂಡು ಹೋಗಿದ್ದರು. ಇದರ ಬೆನ್ನಲ್ಲೆ ಮಂಗಳೂರಿನಲ್ಲಿ ಕೋಟೆಕಾರು ಬ್ಯಾಂಕ್ ರಾಬರಿಯಾಗಿತ್ತು. ಇದೀಗ ಮೈಸೂರಿನಲ್ಲಿ ಹಾಡಹಗಲೇ ಕಾರನ್ನು ಅಡ್ಡಗಟ್ಟಿದ ಕಿಡಿಗೇಡಿಗಳು ಹಣ, ಕಾರನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ : 25ಕ್ಕೂ ಹೆಚ್ಚು ಜನರಿಗೆ ಗಾಯ !
ಮೈಸೂರು ಜಿಲ್ಲೆ, ಜಯಪುರ ಹೋಬಳಿ, ಹಾರೋಹಳ್ಳಿ ಬಳಿ ಘಟನೆ ನಡೆದಿದ್ದು. ಎರಡು ಕಾರಿನಲ್ಲಿ ಬಂದಿಳಿದ ನಾಲ್ವರು ಮುಸುಕುದಾರಿಗಳು ಇನೋವಾ ಕಾರನ್ನು ಅಡ್ಡಗಟ್ಟಿ ಹಣವನ್ನು ಕಸಿದುಕೊಂಡು ಎಸ್ಕೇಪ್ ಆಗಿದ್ದಾರೆ. ಹಣದ ಜೊತೆಗೆ ಸಂತ್ರಸ್ಥನ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ.
ಘಟನೆ ಸಂಬಂಧ ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.