ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಮುಗಿಯಲು ಕೇವಲ ಒಂದುವಾರ ಮಾತ್ರ ಉಳಿದಿದೆ. ಈ ನಡುವೆ ಕಾರ್ಯಕ್ರಮದ ಜನಪ್ರಿಯ ನಿರೂಪಕರಾದ ಕಿಚ್ಚ ಸುದೀಪ್ ತಮ್ಮ ಸಾಮಾಜಿಕ ಜಾಲತಾಣ ಎಕ್ಷ್ನಲ್ಲಿ ಕಾರ್ಯಕ್ರಮದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ‘
ಬಿಗ್ಬಾಸ್ ನಿರೂಪಣೆಗೆ ಗುಡ್ಬಾಯ್ ಹೇಳುವುದಾಗಿ ಸುದೀಪ್ ಸೀಸನ್ ಆರಂಭದಲ್ಲಿಯೆ ಹೇಳಿದ್ದರು. ಈ ಹಿಂದೆಯೂ ಬಿಗ್ಬಾಸ್ನಿಂದ ಸಿನಿಮಾದಲ್ಲಿ ತೊಡಗಿಸಿಕೊಳ್ಳುವುದಕ್ಕೆ ತೊಂದರೆಯಾಗುತ್ತಿದೆ ಎಂದು ಅನೇಕ ಬಾರಿ ಹೇಳಿದ್ದರು. ಆದರೆ ಹನ್ನೊಂದನೆ ಸೀಸನ್ನಲ್ಲಿ ಧೃಡ ನಿರ್ಧಾರ ಕೈಗೊಂಡಿರುವ ಕಿಚ್ಚ ಇದೇ ಕೊನೆಯ ಸೀಸನ್ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹನಿಟ್ರ್ಯಾಪ್ ಪ್ರಕರಣ : ಅಂಕಲ್ ಬಟ್ಟೆ ಬಿಚ್ಚಿಸಿ ಪಾಪರ್ ಮಾಡಿದ್ದ ಸುಂದರಿ ಅರೆಸ್ಟ್ !
ಸುದೀಪ್ ಹೇಳಿದ್ದೇನು?
ಕಳೆದ 11 ಸೀಸನ್ಗಳಿಂದ ನಾನು ಬಿಗ್ಬಾಸ್ ಅನ್ನು ತುಂಬಾ ಇಷ್ಟಪಟ್ಟಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫೈನಲ್ ನನ್ನ ಕೊನೆಯ ನಿರೂಪಣೆ. ನಿಮ್ಮನ್ನು ಮನರಂಜಿಸಲು ನಾನು ಪ್ರಯತ್ನಿಸುತ್ತೇನೆ.
ಬಿಗ್ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು. ಇದನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದೇನೆ ಎಂಬ ಸಂತೋಷ ನನಗಿದೆ. ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ ಮತ್ತು ಗೌರವವಿದೆ ಎಂದು ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.