ಕೊಲ್ಕತ್ತಾ: ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆರ್ಜಿ ಕರ್ ಮೆಡಿಕಲ್ ಕಾಲೇಜು ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಂಜಯ್ ರಾಯ್‌ನನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಕೇವಲ 57 ದಿನಗಳಲ್ಲೆ ತೀರ್ಪು ಪ್ರಕರಟಿಸಿರುವುದು ವಿಶೇಷವಾಗಿದೆ.
ಕೋಲ್ಕತ್ತಾ ಸೆಷನ್ಸ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ಇಂದು ತೀರ್ಪು ಪ್ರಕಟಿಸಿದರು. ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂಜಯ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು. ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ. ವಿಚಾರಣೆ ನಡೆಸಿ ಕೇವಲ 57 ದಿನಗಳಲ್ಲೇ ಕೋರ್ಟ್ ತೀರ್ಪು ಪ್ರಕಟಿಸಿರುವುದು ಈ ಪ್ರಕರಣದ ವಿಶೇಶವಾಗಿದೆ.
ಇದನ್ನೂ ಓದಿ :ಅಭಿವೃದ್ದಿಗೆ ಅವರಪ್ಪನ ಮನೆ ದುಡ್ಡೇನು ಕೊಡ್ತಿಲ್ಲ : ಪ್ರಿಯಾಂಕ್ ವಿರುದ್ದ ಆರ್.ಅಶೋಕ್ ಕಿಡಿ !
ಟ್ರೈನಿ ವೈದ್ಯಯ ಅತ್ಯಾಚಾರದ ನಂತರ ಇಡೀ ದೇಶಾದ್ಯಂತ ವೈದ್ಯ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಪ್ರತಿಭಟನೆ ನಡೆಸಿದ್ದರು. ಹಲವಡೆ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು, ಇದರಿಂದ ಜನರು ಪರದಾಡುವಂತಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐಗೆ ವಹಿಸಿದ್ದರು. ಈ ಪ್ರಕರಣದಲ್ಲಿ ಸಿಬಿಐ ವೈದ್ಯರ ರಕ್ಷಣೆಗೆ ಎಂದು ಗೈಡ್ಲೈನ್ ತರಲು ಟಾಸ್ಕ್ಪೋರ್ಸ್ ಜಾರಿ ಮಾಡಲಾಗಿತ್ತು.