ಬೆಂಗಳೂರು : ಪ್ರಿಯಾಂಕ್ ಖರ್ಗೆ ಅನುದಾನ ವಾಪಾಸ್ ವಿಚಾರಕ್ಕೆ ಟಾಂಗ್ ನೀಡಿದ ಅಶೋಕ್ ‘ ಕಾಂಗ್ರೆಸ್ನವರು ಅವರ ಅಪ್ಪನ ಮನೆಯಿಂದ ಏನು ದುಡ್ಡು ಕೊಡ್ತಿಲ್ಲ. ಬಿಜೆಪಿಗೆ ಮತ ಹಾಕಿರುವ ಮತದಾರರು ಟ್ಯಾಕ್ಸ್ ಕಟ್ಟುತ್ತಿದ್ದಾರೆ. ಅವರೇನು ಅವರಪ್ಪನ ಮನೆಯಿಂದ ದುಡ್ಡು ಕೊಡ್ತಿಲ್ಲಾ ಎಂದು ಕಿಡಿಕಾರಿದರು.
ಇದನ್ನೂ ಓದಿ : ಪ್ರತಾಪ್ ಸಿಂಹ ಉಚ್ಚಾಟನೆಯ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ : ಯದುವೀರ್
ಅಭಿವೃದ್ದಿಗೆ ಹಣವನ್ನು ಕಾಂಗ್ರೆಸ್ ಅವರಪ್ಪನ ಮನೆ ಆಸ್ತಿಯಿಂದ ನೀಡಿದ್ದರೆ, ನಾವು ಹಣವನ್ನು ಕೇಳುತ್ತಿರಲಿಲ್ಲ. ನಾವೂ ಕೂಡ ಟ್ಯಾಕ್ಸ್ ಕಟ್ಟುತ್ತಿದ್ದೇವೆ, ಕೋಟ್ಯಾಂತರ ಜನರು ಟ್ಯಾಕ್ಸ್ ಕಟ್ಟುತ್ತಿದ್ದಾರೆ. ಕಳೆದ ಬಾರಿ ಬೊಮ್ಮಾಯಿ ಅಭಿವೃದ್ದಿಗೆ ಎಷ್ಟು ಹಣ ನೀಡಿದ್ದಾರೆ, ಇವರಿ ಎಷ್ಟು ಹಣವನ್ನು ನೀಡಿದ್ದಾರೆ ಎಂದು ಹೇಳಲಿ.
ಇವರದ್ದು ಪಾಪರ್ ಸರ್ಕಾರ, ಬಿಜೆಪಿ ಸಾಲ ಬಿಟ್ಟು ಹೋಗಿದೆ ಎಂದು ಹೇಳಿದ್ದಾರೆ, ಹಾಗಾದರೆ ಶ್ವೇತ ಪತ್ರವನ್ನು ಬಿಡುಗಡೆ ಮಾಡಲಿ. 60 ವರ್ಷದಲ್ಲಿ ಕಾಂಗ್ರೆಸ್ ಎಷ್ಟು ಸಾಲ ಬಿಟ್ಟಿದೆ. ಬಿಜೆಪಿ 9 ವರ್ಷದಲ್ಲಿ ಎಷ್ಟು ಸಾಲ ಮಾಡಿದೆ ಎಂದು ಹೇಳಲಿ. ಬಿಜೆಪಿ 2009ರಲ್ಲಿ ಅಧಿಕಾರಕ್ಕೆ ಬಂದಿದೆ. ನೀವು ಲಾಭ ಮಾಡಿದ್ದರೆ, ನಾವು ಅದನ್ನು ಮುಂದುವರಿಸುತ್ತಿದ್ದೊ. ಆದರೆ ನೀವು ಖೋತಾ ಬಜೆಟ್ ಮಾಡಿದಿರಿ ಎಂದು ಕಿಡಿಕಾರಿದರು.