ಬೆಳಗಾವಿ: ಕೊಟ್ಟ ಸಾಲವನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸದ ಕಾರಣ, ಸಾಲ ಪಡೆದ ಮಹಿಳೆಯ ಅಪ್ರಾಪ್ತ ಮಗಳನ್ನು ತನ್ನ ಮಗನ ಜೊತೆ ಮದುವೆ ಮಾಡಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು. ಘಟನೆ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆ ಪೋಕ್ಸೋ ಪ್ರಕರಣ ದಾಖಲಾಗಿದೆ.
ಬೆಳಗಾವಿಯ ವಡಗಾವಿ ನಿವಾಸಿ ರೇಖಾ ಢವಳಿ ಹತ್ತಿರ ಅಪ್ರಾಪ್ತ ಯುವತಿಯ ತಾಯಿ 50 ಸಾವಿರ ಹಣವನ್ನು ಸಾಲಪಡೆದ್ದಳು. ತನ್ನ ಮಗಳಿಗೆ ಮತ್ತು ಅತ್ತಿಗೆ ಹೆರಿಗೆಗೆ ಎಂದು ಸಾಲ ಪಡೆದಿದ್ದಳು. ಆದರೆ ಹಣವನ್ನು ಸರಿಯಾದ ಸಮಯಕ್ಕೆ ವಾಪಾಸು ಮಾಡದ ಹಿನ್ನಲೆ ತನ್ನ ಬಳಿಯಿದ್ದ ಒಡವೆಗಳನ್ನು ರೇಖಾ ಡವಳಿ ಬಳಿಯಲ್ಲಿ ಗಿರವಿ ಮಡಗಿದ್ದಳು.
ಇದನ್ನೂ ಓದಿ: ಕಾಗೋಡು ತಿಮ್ಮಪ್ಪರಿಗೆ ಡಬ್ಬಲ್ ಧಮಾಕ: ಕೃಷಿ ವಿವಿ ಬಳಿಕ ಕುವೆಂಪು ವಿವಿಯಿಂದ ಡಾಕ್ಟರೇಟ್ ಘೊಷಣೆ !
ಆದರೆ ಸಾಲವನ್ನು ಸರಿಯಾದ ಸಮಯಕ್ಕೆ ವಾಪಾಸ್ ಕೊಡದ ಹಿನ್ನಲೆ ಸಾಲ ಪಡೆದ ಮಹಿಳೆಯ ಅಪ್ರಾಪ್ತ ಮಗಳನ್ನು ರೇಖಾ ತನ್ನ ಮಗನಾದ ವಿಶಾಲ್ ಢವಳಿಗೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಇದೇ ಕಾರಣಕ್ಕೆ ನಿನ್ನೆ (ಜ.17) ರಂದು ಒತ್ತಾಯ ಪೂರ್ವಕವಾಗಿ ಅಪ್ರಾಪ್ತೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದರು.
ಅಥಣಿಗೆ ಕರೆದುಕೊಂಡು ಹೋಗಿ ದೇವಸ್ಥಾನದಲ್ಲಿ ಮದುವೆ ಮಾಡಿದ್ದರು. ಅದೇ ದಿನ ರಾತ್ರಿ ಬಾಲಕಿಯೊಂದಿಗೆ ಅಪ್ರಾಪ್ತೆಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಹೊಂದಿದ್ದನು. ಈ ಘಟನೆ ಬಗ್ಗೆ ಅಪ್ರಾಪ್ತೆಯ ತಾಯಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಕ್ರಮ ಕೈಗೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು. ಅಪ್ರಾಪ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.