Saturday, January 18, 2025

ಗವಿಮಠವನ್ನು ಬೇರೊಂದು, ಮಠದ ಜೊತೆ ಹೋಲಿಕೆ ಮಾಡಬೇಡಿ : ಕಣ್ಣೀರಾಕಿದ ಗವಿಶ್ರೀ !

ಕೊಪ್ಫಳ : ಶ್ರೀ ಗವಿಸಿದ್ದೇಶ್ವರ ಜಾತ್ರಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಭಾವುಕರಾಗಿದ್ದು. ಗವಿ ಮಠವನ್ನು ಬೇರೊಂದು ಮಠಗಳ ಜೊತೆ ಹೋಲಿಕೆ ಮಾಡಬೇಡಿ. ನನಗೆ ಪ್ರಶಸ್ತಿ ನೀಡಿ ಎಂದು ಸಹ ಯಾರೂ ಅಭಿಯಾನ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕೊಪ್ಪಳದ ವಿಶ್ವಪ್ರಸಿದ್ದ ಗವಿಸಿದ್ದೇಶ್ವರ ಜಾತ್ರಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಗವಶ್ರೀ ‘ನನಗೆ ಪ್ರಶಸ್ತಿ ನೀಡುವಂತೆ, ಬೇರೊಂದು ಮಠದ ಜೊತೆಗೆ ಹೋಲಿಕೆ ಮಾಡದಂತೆ ಮನವಿ ಮಾಡಿದರು. ಇವುಗಳ ಕುರಿತು ಯಾರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳನ್ನು ಹಾಕಬೇಡಿ. ರೈಲ್ವೇ ನಿಲ್ದಾಣಕ್ಕೆ ಗವಿಸಿದ್ದೇಶ್ವರನ ಹೆಸರಿಡುವಂತೆ ಅಭಿಯಾನ ಮಾಡೋದು ಬೇಡ. ಗವಿ ಸಿದ್ದೇಶ್ವರ ನಿಮ್ಮ ಉಸಿರಿನಲ್ಲಿದ್ದಾನೆ. ಈಗಿರುವಾಗ ಬೇರೆ ಕಡೆ ಯಾಕೆ ಹೆಸರನ್ನು ಇಡಬೇಕು ಎಂದು ಹೇಳಿದರು.

ಇದನ್ನೂ ಓದಿ :‘ಪೋಲಿಸಪ್ಪ ಡೌರಿ ಬೇಕೇನಪ್ಪ’ : ಪೊಲೀಸ್​ ಪತಿಯ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಪತ್ನಿ !

ಮುಂದುವರಿದು ಮಾತನಾಡಿದ ಶ್ರೀಗಳು ‘ನಾನು ಇಡೀ ನಾಡಿನ ಶರಣರ ಪಾದದ ಧೂಳಾಗಿ ಬದುಕಬೇಕು ಎಂದುಕೊಂಡವನು. ಅದಕ್ಕಾಗಿ ಗವಿಮಠವನ್ನು ಇನ್ನೊಂದು ಮಠದ ಜೊತೆಗೆ ಹೋಲಿಕೆ ಮಾಡಬೇಡಿ. ನನ್ನನ್ನು ಮತ್ತೊಂದು ಮಠದ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ. ನನಗೆ ಪ್ರಶಸ್ತಿ ನೀಡುವ ಬಗ್ಗೆ ಯಾರೂ ಪೋಸ್ಟ್​ ಮಾಡಬೇಡಿ. ಮನವಿ ಮಾಡೋದು ಕೂಡ ಬೇಡ.

ನನಗೆ ಬರುವ ಪ್ರಶಸ್ತಿಯನ್ನು ತಿರಸ್ಕರಿಸುವ ಅರ್ಹತೆ ನನಗೆ ಇಲ್ಲ, ಆದರೆ ಬೇಡ ಎನ್ನುವ ವಿನಮ್ರತೆ ನನಗೆ ಇದೆ. ಅದಕ್ಕಾಗಿ ನನಗೆ ಆ ಪ್ರಶಸ್ತಿ , ಈ ಪ್ರಶಸ್ತಿ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಯಾರೂ ಮಾಡಬೇಡಿ ಎಂದು ನೆರೆದಿದ್ದ ಭಕ್ತರಲ್ಲಿ ಶ್ರೀಗಳು ಮನವಿ ಮಾಡಿದರು.

RELATED ARTICLES

Related Articles

TRENDING ARTICLES