ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು 44 ವರ್ಷದ ನಂಜುಂಡೇಗೌಡ ಎಂದು ಗುರುತಿಸಲಾಗಿದೆ.
ರೈತರಿಂದ ಹಾಲು ಸಂಗ್ರಹ ಮಾಡಿಕೊಂಡು ಡೈರಿಗೆ ಹಾಲು ಹಾಕಲು ಮಹೀಂದ್ರ ಜಿತೋ ವಾಹನದಲ್ಲಿ ನಂಜುಂಡೇಗೌಡ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಮರುವನಹಳ್ಳಿ-ಮಡಬ ರಸ್ತೆಯಲ್ಲಿ ಮರದ ಪಟ್ಟಿಗೆ ಮೊಳೆ ಇಟ್ಟು ವಾಹನ ಪಂಚರ್ ಮಾಡಿದ್ದಾರೆ. ವಾಹನ ಪಂಕ್ಚರ್ ಆಗಿರುವುದನ್ನು ಗಮನಿಸಿದ ನಂಜುಂಡೇಗೌಡ ವಾಹನದಿಂದ ಕೆಳಗೆ ಇಳಿದಿದ್ದಾನೆ.
ಇದನ್ನೂ ಓದಿ : Aeroindia 2025 : ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಂದ ಕ್ರೇನ್ಗಳನ್ನು ಕೆಳಗಿಳಿಸುವಂತೆ ಬಿಬಿಎಂಪಿ ಆದೇಶ
ಇದೇ ಸಮಯಕ್ಕೆ ಕಾಯುತ್ತಿದ್ದ ದುಷ್ಕರ್ಮಿಗಳು ನಂಜುಂಡೇಗೌಡನನ್ನು ಲಾಂಗ್ನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ನಂಜುಂಡೇಗೌಡನ ಕುತ್ತಿಗೆ, ತಲೆ, ಕೈಗೆ ಲಾಂಗ್ನಿಂದ ಭೀಕರವಾಗಿ ಹಲ್ಲೆ ಮಾಡಿದ್ದು. ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.