Saturday, January 18, 2025

ಪೋಕ್ಸೊ ಕೇಸ್​ನಲ್ಲಿ ಜೈಲು ಸೇರಿ ಹೊರಬಂದಿದ್ದ ಪ್ರಿಯಕರನಿಂದ, ಪ್ರೇಯಸಿಗೆ ಚಾಕು ಇರಿತ !

ಬೆಂಗಳೂರು : 8 ವರ್ಷದ ಹಿಂದೆ ಅಪ್ರಾಪ್ತ ಬಾಲಕಿಯನ್ನು ಪ್ರೀತಿ ಮಾಡಿ, ಪೋಕ್ಸೋ ಕೇಸ್​ನಲ್ಲಿ ಜೈಲುವಾಸ ಅನುಭವಿಸಿ ಹೊರಬಂದಿದ್ದ ಯುವಕನೊರ್ವ, ಯುವತಿ ಮದುವೆಗೆ ಒಪ್ಪದ ಹಿನ್ನಲೆ ಚಾಕು ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಆರೋಪಿಯನ್ನು ಅಜಯ್​ ಎಂದು ಗುರುತಿಸಲಾಗಿದೆ.

ಆರೋಪಿ ಅಜಯ್​ 8 ವರ್ಷದ ಹಿಂದೆ ಅಪ್ರಾಪ್ತ ಬಾಲಕಿಯನ್ನು ಪ್ರೀತಿ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಜೆಜೆ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಿದ್ದರು. ಜೈಲಿನಲ್ಲಿದ್ದ ಆರೋಪಿ ಕಳೆದ ಮೂರು ವರ್ಷದ ಹಿಂದೆ ಜೈಲಿನಿಂದ ಹೊರಬಂದು ಮತ್ತೆ ಒಂದಾಗಿದ್ದನು. ಕಳೆದ ಮೂರು ವರ್ಷದಿಂದ ಒಟ್ಟಾಗಿ ವಿವಿದೆಡೆ ಒಡಾಡುತ್ತಿದ್ದ ಇಬ್ಬರು, ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು.

ಇದನ್ನೂ ಓದಿ : ‘ಬಾ ಯವ್ವಾ, ನೀನು ಬಾರದೆ ಇದ್ರೆ ಜಾತ್ರೆ ಮುಗಿಯಲ್ದು : ಬುದ್ದಿಮಾಂದ್ಯೆ ಕೈಯಿಂದ ಗವಿಶ್ರೀಗಳಿಗೆ ಸನ್ಮಾನ !

ಆದರೆ ಈ ಮದುವೆಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈ ವಿರೋಧದ ನಡುವೆಯು ಯುವತಿ ಮದುವೆಯಾಗುವುದಾಗಿ ಹೇಳಿದ್ದಳು. ಇದರಿಂದ ಯುವಕನ ಕುಟುಂಬಸ್ಥರು ಮದುವೆಗೆ ಸಿದ್ದತೆ ಮಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಯುವತಿ ಉಲ್ಟಾ ಹೊಡೆದಿದ್ದ ಯುವತಿ ಮದುವೆ ಆಗಲು ನಿರಾಕರಿಸಿದ್ದಳು.

ಇದರಿಂದ ಕುಪಿತನಾಗಿದ್ದ ಅಜಯ್​ ಕಳೆದ ನಾಲ್ಕು ದಿನದ ಹಿಂದೆ ಜೆಜೆ.ನಗರದ ಬಿನ್ನಿ ಲೇಔಟ್​ನಲ್ಲಿರುವ ಯುವತಿ ಮನೆಗೆ ಬಂದಿದ್ದನು. ಈ ವೇಳೆ ಯುವತಿ ಮದುವೆ ಆಗಲು ನಿರಾಕರಿಸಿದ್ದರಿಂದ ಯುವತಿಗೆ ಚಾಕು ಇರಿದು ಎಸ್ಕೇಪ್​ ಆಗಿದ್ದನು. ಚಾಕು ಇರಿತದಿಂದ ಗಾಯಗೊಂಡಿರುವ ಯುವತಿ ಪ್ರಾಣಾಪಾಯದಿಂದ ಪಾರಗಿದ್ದಾಳೆ.

ಆದರೆ ಯಾವ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಜೈಲುವಾಸ ಅನುಭವಿಸಿ ಹೊರಗಡೆ ಬಂದಿದ್ದ ಆರೋಪಿ. ಇದೀಗ ಅದೇ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮತ್ತೆ ಜೈಲು ಸೇರುವಂತಾಗಿದ್ದಂತು ದುರಂತ ಎಂದು ಹೇಳಬಹುದು.

 

RELATED ARTICLES

Related Articles

TRENDING ARTICLES