ಬೆಂಗಳೂರು : ಅಮೆರಿಕಾ ತೆರಳಬೇಕಿದ್ದ ಕರ್ನಾಟಕದ ಜನತೆ ವೀಸಾ ಪಡೆಯಲು ಇದುವರೆಗೂ ಹೈದರಾಬಾದ್ ಅಥವಾ ಚೆನ್ನೈ ನಗರದಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿಗೆ ಹೋಗಬೇಕಿತ್ತು. ಆದರೆ ಇದೀಗ ಈ ತಲೆನೋವು ತಪ್ಪಿದ್ದು. ಬೆಂಗಳೂರಿನಲ್ಲೆ ಅಮೇರಿಕಾ ರಾಯಭಾರಿ ಕಛೇರಿ ಸ್ಥಾಪನೆಯಾಗಿದೆ. ಈ ಕುರಿತು ಸಂಸದ ತೇಜಸ್ವಿ ಸೂರ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
2019ರಿಂದಲೂ ಬೆಂಗಳೂರಿನಲ್ಲಿ ಅಮೇರಿಕಾ ದೂತವಾಸ ಕಚೇರಿಯನ್ನು ತೆರೆಯಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅವಿರತವಾಗಿ ಶ್ರಮಿಸುತ್ತಿದ್ದರು. ಇದೀಗ ಅವರ ಕಾರ್ಯಕ್ಕೆ ಫಲ ಸಿಕ್ಕಿದ್ದು. ಬೆಂಗಳೂರಿನಲ್ಲಿ ಅಮೇರಿಕಾದ ದೂತವಾಸ ಕಚೇರಿ ಸ್ಥಾಪನೆಯಾಗುತ್ತಲಿದೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ವಿದೇಶಾಂಗ ಸಚಿವ ಜೈ ಶಂಕರ್ರಿಗೆ ಕರ್ನಾಟಕದ ಮೋಸ್ಟ್ ಫೇಮಸ್ ಸಿಹಿ ತಿನಿಸಾದ ಮೈಸೂರ್ ಪಾಕ್ ನೀಡಿ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ :ಕೇಂದ್ರ ಸಚಿವ ಸೋಮಣ್ಣಗೆ ವಿವಾಹ ಆಹ್ವಾನ ಪತ್ರಿಕೆ ನೀಡಿದ ಡಾಲಿ ಧನಂಜಯ್ !
ವೈಟ್ಫಿಲ್ಡ್ನಲ್ಲಿ ಕಚೇರಿ ಸ್ಥಾಪನೆಯಾಗುವ ಸಾಧ್ಯತೆ !
ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ತೆರೆಯಲಾಗುತಿದ್ದು. ಐಟಿ ಬಿಟಿ ಕಂಪನಿಗಳು ಹೆಚ್ಚಿರುವ ವೈಟ್‌ಫೀಲ್ಡ್‌ನಲ್ಲಿಯೇ ಬೆಂಗಳೂರಿನ ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರಾಜ್ಯದ ಐಟಿಬಿಟಿ ಹಾಗೂ ಕೈಗಾರಿಕಾ ಸಚಿವರ ಜತೆ ಮಾತುಕತೆ ಕೂಡ ಆಗಿದೆ ಎನ್ನಲಾಗಿದೆ.
ಇದರ ಜೊತೆಗೆ ಶೀಘ್ರದಲ್ಲೆ ಬೆಂಗಳೂರಿನಲ್ಲಿ ಸ್ಪೇನ್ ದೂತವಾಸ ಕಚೇರಿ ಆರಂಭವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದೆ.