Friday, January 17, 2025

ಸ್ಥಾನಮಾನ ಎಂಬುದು ಅಂಗಡಿಯಲ್ಲಿ ಸಿಗಲ್ಲ, ಹೈಕಮಾಂಡ್​ ಬಳಿಯಲ್ಲಿ ಮಾತನಾಡಲಿ : ಡಿಕೆಶಿ !

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿದ ಡಿ,ಕೆ ಶಿವಕುಮಾರ್​ ‘ಇಂತಹ ಯಾವುದೇ ವಿಚಾರವಿದ್ದರು, ನಾನೇ ಹೇಳುತ್ತೀನಿ. ಆದರೆ ಈಗ ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳಲು ಪ್ರಧಾನ ಕಾರ್ಯದರ್ಶಿಗಳು, ಸಿಎಂ ಇಬ್ಬರು ಬುದ್ದಿ ಹೇಳಿದ್ದಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಡಿಕೆ.ಶಿವಕುಮಾರ್​ ‘ ನಾಳೆ ಬೆಳಗಾವಿಗೆ ಸುರ್ಜೇವಾಲ ಸಾಹೇಬರು ಬರುತ್ತಿದ್ದಾರೆ. ಇಂತಹ ಪಕ್ಷಕ್ಕೆ ಸಂಬಂಧಿಸಿದ ವಿಚಾರಗಳನ್ನು ಯಾರೂ ಕೂಡ ಮಾಧ್ಯಮದಲ್ಲಿ ಮಾತನಾಡಬಾರದು. ಮಾತಾಡೋದಾದರೆ ಹೈಕಮಾಂಡ್​ ಬಳಿಯಲ್ಲಿ, ಅಥವಾ ನನ್ನ, ಸಿಎಂ ಬಳಿಯಲ್ಲಿ ಮಾತನಾಡಲಿ.  ಹುದ್ದೆ, ಸ್ಥಾನಮಾನ ಎಂಬುದು ಅಂಗಡಿಯಲ್ಲಿ ಸಿಗುವ ವಸ್ತುವಲ್ಲ, ಅವುಗಳನ್ನು ನಮ್ಮ ಶ್ರಮ, ಫಲ ನೋಡಿ ಪಕ್ಷ ಕೊಡುತ್ತೆ. ಅವರು ಕೂಡ ಅದಕ್ಕೆ ಪ್ರಯತ್ನಿಸಬಹುದು.

ಇದನ್ನೂ ಓದಿ : KPCC ಅಧ್ಯಕ್ಷ ಸ್ಥಾನಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ : ಪರಮೇಶ್ವರ್​

ಆದರೆ ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ಡಿಕೆ ಶಿವಕುಮಾರ್ ಒಬ್ಬನೆ ಅಧಿಕಾರಕ್ಕೆ ತಂದಿಲ್ಲ. ಮತದಾರರು ಮತದಾನ ಮಾಡಿ ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಯಾರೆ ಹೋದ್ರು ಕೂಡ ಪಕ್ಷ ಇರುತ್ತೆ. ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟರು ಸಹ, ಅವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದರು. ಅಂಬೆಡ್ಕರ್​ ಕೂಡ ಸಂವಿಧಾನದ ಫಲವನ್ನು ಪಡೆಯಲಿಲ್ಲ ಎಂದು ಹೇಳಿದರು.

 

RELATED ARTICLES

Related Articles

TRENDING ARTICLES