Monday, January 13, 2025

ಕೊಲೆ ಆರೋಪಿ ‌ಬಂಧನ..!

ಚಿತ್ರದುರ್ಗ : ಹೊಸದುರ್ಗದ ಯಾಲಕ್ಕಪ್ಪನಹಟ್ಟಿ ಸಿದ್ದಪ್ಪನ ಬೆಟ್ಟದಲ್ಲಿ ಯುವಕನನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು ಹೊಸದುರ್ಗ ಪೋಲಿಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಸಿದ್ದಪ್ಪನ ಬೆಟ್ಟದಲ್ಲಿ‌ ಆಶೋಕ ಎಂಬ ಯುವಕನ ಕೊಲೆಯನ್ನು‌ ಮಾಡಲಾಗಿತ್ತು. ಈ ವಿಷಯವನ್ನು ತಿಳಿದ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಅರೋಪಿಗಾಗಿ ಹೊಸದುರ್ಗದ ಪೋಲಿಸರು ಬಲೆ ಬೀಸಿ ದೇವರಾಜ್ ಎನ್ನೋ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ ಕೊಲೆಗಾಗಿ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES