ಬೀದರ್ : ಜಿಲ್ಲೆಯಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದ್ದು. ಎಸ್‌ಬಿಐ ಬ್ಯಾಂಕ್ನಿಂದ ಎಟಿಎಂಗೆ ಹಣ ಸಾಗಿಸುತ್ತಿದ್ದ CMS ವಾಹನ ಸಿಬ್ಬಂದಿಗಳ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು, ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.
ಬೀದರ್ನ ಎಸ್‌ಬಿಐ ಮುಖ್ಯ ಕಚೇರಿ ಮುಂದೆಯೆ ಗುಂಡಿನ ದಾಳಿ ನಡೆದಿದ್ದು. ಡಿಸಿ ಕಛೇರಿಯ ಮುಂಭಾಗದಲ್ಲಿಯೇ ಈ ದುಷ್ಕೃತ್ಯ ನಡೆದಿದೆ. ಬ್ಯಾಂಕ್ ಮತ್ತು ಎಟಿಎಂಗೆ ಹಣ ಸಾಗಾಟ ಮಾಡುವ ಸಿಎಂಸಿ ವಾಹನ ಸಿಬ್ಬಂದಿಗಳು ಹಣವನ್ನು ಕೊಂಡೊಯ್ಯುವಾಗ ಸ್ಥಳಕ್ಕೆ ಬಂದ ದರೋಡೆಕೋರರು ವಾಹನದ ಸಿಬ್ಬಂದಿಗಳ ಮೇಲೆ ಕಾರದ ಪುಡಿಯನ್ನು ಎರಚಿ, ಗುಂಡಿನ ದಾಳಿ ನಡೆಸಿದ್ದಾರೆ. ಸುಮಾರು 93 ಲಕ್ಷ ಹಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ : ದೇವರ ಹರಕೆಗೆ ಬಿಟ್ಟಿದ್ದ ಕರುವಿನ ಮೇಲೆ ಮಚ್ಚಿನಿಂದ ದಾಳಿ !
ಸುಮಾರು 5 ಸುತ್ತಿನ ಗುಂಡಿನ ದಾಳಿ ನಡೆಸಿರುವ ದುಷ್ಕರ್ಮಿಗಳು, ಹಣವನ್ನು ತಮ್ಮ ಬೈಕ್ ಮೇಲೆ ಕೊಂಡೊಯ್ದಿದ್ದಾರೆ. ಈ ದಾಳಿಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು. ಮತ್ತೊರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಮಾಹಿತಿ ದೊರೆತಿದೆ. ಮೃತನನ್ನು ಹಣಕಾಸು ವ್ಯವಸ್ಥಾಪಕ ವೆಂಕಟೇಶ್ ಗಿರಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.