Wednesday, January 15, 2025

ಭೀಕರ ರಸ್ತೆ ಅಪಘಾತ : ಕಾರಿನಡಿ ಸಿಲುಕಿದ ಬೈಕ್​ ಸವಾರನಿಗೆ ಗಂಭೀರ ಗಾಯ !

ಚಿಕ್ಕಮಗಳೂರು : ಕಾಫಿನಾಡಲ್ಲಿ ಎದೆ ಝಲ್ ಅನ್ನಿಸುವಂತಹ ಅಪಘಾತವಾಗಿದ್ದು. ಕಾರು ಮತ್ತು ಬೈಕ್​ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಬೈಕ್​ ಸವಾರ ತನ್ನ ಸೊಂಟವನ್ನು ಮುರಿದುಕೊಂಡಿದ್ದು. ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮಾಹಿತಿ ದೊರೆತಿದೆ.

ಹೌದು.. ಚಿಕ್ಕಮಗಳೂರಿನ, ಬೈಪಾಸ್​ ಸಮೀಪ, ಕುರವಂಗಿ ರಸ್ತೆಯಲ್ಲಿ ಘಟನೆ ನಡೆದಿದ್ದು. ಅಪಘಾತದ ದೃಷ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಬೈಕ್​ ಸವಾರ ರಾಜಶೇಖರ್​ಗೆ ಕಾರು ಡಿಕ್ಕಿಯಾಗಿದ್ದು. ಕಾರಿನ ಕೆಳಗೆ ಬೈಕ್​ ಸಿಲುಕಿದರು ಕೂಡ ಕಾರ್​ ಚಾಲಕ ವಾಹನವನ್ನು ನಿಲ್ಲಿಸದೆ ಸುಮಾರು 60 ಮೀಟರ್​ ಏಳೆದುಕೊಂಡು ಹೋಗಿದ್ದಾನೆ. ನಂತರ ಕಾರ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ : ನೌಕಾಪಡೆಗೆ ಮತ್ತಷ್ಟು ಬಲ ತುಂಬಿದ ಮೋದಿ : ಹೊಸ ನೌಕೆಗಳ ಸ್ಪೆಷಾಲಿಟಿ ಏನು ಗೊತ್ತಾ !

ಈ ಅಪಘಾತದಲ್ಲಿ ಬೈಕ್​ ಚಾಲಕ ರಾಜಶೇಖರ್ ಗಂಭೀರವಾಗಿ ಗಾಯಗೊಂಡಿದ್ದು. ಸೊಂಟದ ಮೂಳೆ ಮುರಿದಿದೆ. ರಾಜಶೇಖರ್​ಗೆ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಘಟನೆ ಸಂಬಂಧ ಚಿಕ್ಕಮಗಳೂರು ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES