ಹಾಸನ : ಸ್ನೇಹಿತನ ಕೊಲೆ ಮಾಡಿ, ಶವವನ್ನು ಶಿರಾಡಿಘಾಟ್ನ ಪ್ರಪಾತಕ್ಕೆ ಎಸೆದಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನು 34 ವರ್ಷದ ಶಿವಕುಮಾರ್ ಎಂದು ಗುರುತಿಸಲಾಗಿದೆ.
ಹಾಸನ ತಾಲ್ಲೂಕಿನ, ಹರಳಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಇದೇ ಗ್ರಾಮದ ಶರತ್ ಹಾಗೂ ಪ್ರತಾಪ್ ಎಂಬುವವರಿಂದ ಕೃತ್ಯ ನಡೆದಿದೆ. ಹರಳಹಳ್ಳಿ ಗ್ರಾಮದ ಶಿವಕುಮಾರ್ ಹೈದರಾಬಾದ್ನ ಬೇಕರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಆದರೆ ಕಳೆದ ನಾಲ್ಕು ದಿನದ ಹಿಂದೆ ಗ್ರಾಮದ ಶರತ್ ಮತ್ತು ಪ್ರತಾಪ್ ಎಂಬುವವರು ಶಿವಕುಮಾರ್ರನ್ನು ಹೈದರಾಬಾದ್ನಿಂದ ಕರೆಸಿಕೊಂಡಿದ್ದರು.
ಇದನ್ನೂ ಓದಿ: ಪ್ರಚೋದನಕಾರಿ ಭಾಷಣ ಆರೋಪ : ಪ್ರಮೋದ್ ಮುತಾಲಿಕ್ ವಿರುದ್ದ ಪ್ರಕರಣ ದಾಖಲು !
ಶುಕ್ರವಾರ ಶಿವಕುಮಾರ್ನನ್ನು ಮನೆಯಿಂದ ಕರೆದೊಯ್ದಿದ್ದ ದುಷ್ಕರ್ಮಿಗಳು. ನಂತರ ಶಿವಕುಮಾರ್ಗೆ ಕಂಠಪೂರ್ತಿ ಕುಡಿಸಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತರ ಶವವನ್ನು ಶಿರಾಡಿಘಾಟ್ನ ಗುಂಡ್ಯಾದ ಬಳಿಯಲ್ಲಿ ಶವವನ್ನು ಪ್ರಪಾತಕ್ಕೆ ಎಸೆದಿದ್ದರು. ಈ ವೇಳೆ ಕೊಲೆಗಡುಕರಿಂದ ತಪ್ಪಿಸಿಕೊಂಡಿದ್ದ ದೀಲಿಪ್ ಎಂಬಾತ ಕೊಲೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದನು .
ದೀಲಿಪ್ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಶವವನ್ನು ಹುಡಿಕಿದ್ದಾರೆ. ಕೊಲೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಶರತ್ ಹಾಗೂ ಪ್ರತಾಪ್ ಹುಡುಕಾಟವನ್ನು ಪೊಲೀಸರು ಆರಂಭಿಸಿದ್ದು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಗ್ರಾಮಾಂತರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.