ಬೆಳಗಾವಿ : ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು. ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಕೊಲೆಯಾದ ವ್ಯಕ್ತಿಯನ್ನು 45 ವರ್ಷದ ಲಕ್ಷ್ಮಣ ಮರನೂರು ಎಂದು ಗುರುತಿಸಲಾಗಿದೆ.
ನಿನ್ನೆ(ಜ.12)ಮಧ್ಯಹ್ನಾ ಬೆಲಗಾವಿ ಮೂಡಲಗಿಯ ಬಾರ್ಗೆ ಮಧ್ಯಪಾನ ಮಾಡಲು ಲಕ್ಷ್ಮಣ ಬಂದಿದ್ದನು. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ರಂಗಪ್ಪ ಪಾಟೀಲ್, ಈರಪ್ಪ ತುಂಗಳ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೆ ಹೋಗಿದ್ದು. ಮೂವರ ನಡುವೆ ಪರಸ್ಪರ ಜಗಳ ಆರಂಭವಾಗಿದೆ. ಈ ವೇಳೆ ರಂಗಪ್ಪ ಪಾಟೀಲ್, ಈರಪ್ಪ ತುಂಗಳ ಲಕ್ಷ್ಮಣ್ ಮೇಲೆ ಹಲ್ಲೆ ನಡೆಸಿದ್ದು. ಎಣ್ಣೆ ಗುಂಗಲ್ಲಿದ್ದ ಲಕ್ಷ್ಮಣ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ :ಸಂಕ್ರಾಂತಿ ಸ್ಪೆಷಲ್ : ಹೂ-ಹಣ್ಣುಗಳ ಬೆಲೆಯಲ್ಲಿ ಭಾರಿ ಏರಿಕೆ !
ಈ ವೇಳೆ ರಂಗಪ್ಪ ಪಾಟೀಲ್, ಈರಪ್ಪ ತುಂಗಳ ಶವವನ್ನು ಬಾರ್ನಿಂದ ಹೊರತಂದು ಬಿಸಾಡಿದ್ದು. ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾರೆ. ಈ ಎಲ್ಲಾ ಕೃತ್ಯದ ವಿಡಿಯೋಗಳು ಸ್ಥಳೀಯರ ಕ್ಯಾಮರಗಳಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದು. ಇಬ್ಬರು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಘಟನೆ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.