Monday, January 13, 2025

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಕೊರೋನಾ ಸೋಂಕಿತ ಎಸ್ಕೇಪ್..!

ಹುಬ್ಬಳ್ಳಿ : ಕೊರೋನಾ ಸೋಂಕು ದೃಢಪಟ್ಟಿದ್ದ ರೋಗಿಯೊಬ್ಬ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ನಡೆದಿದೆ. ಕಳ್ಳತನ ಆರೋಪದಲ್ಲಿ ಉಪನಗರ ಠಾಣೆಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು. ಪಿ. 14537 ರೋಗಿಯಾಗಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಳ್ಳತನ ಕೇಸ್ ನ ಆರೋಪಿ ಕಿಮ್ಸ್ ನಿಂದ ಪರಾರಿಯಾಗಿದ್ದಾನೆ‌. ‌ಇಂದು ಬೆಳಿಗ್ಗೆ 5:30 ಕ್ಕೆ ಕಿಮ್ಸ್ ಕೊವಿಡ್ ವಾರ್ಡ್ ನಿಂದ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇಬ್ಬರು ಪೊಲೀಸ್ ಸಿಬ್ಬಂದಿ ಕಾವಲಿಗಿದ್ದರೂ ಅವರ ಕಣ್ಣು ತಪ್ಪಿಸಿ ಪರಾರಿಯಾಗಿದ್ದು ಸಿಬ್ಬಂದಿ,ಜನರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.
ಈತನ ಸಂಪರ್ಕದಿಂದ ಉಪನಗರ ಠಾಣೆಯ ಓರ್ವ ಕಾನ್ಸ್ ಟೇಬಲ್ ಗೆ ಕೊರೊನಾ ದೃಢಪಟ್ಟಿದ್ದು, ಈಗ ಮತ್ತೆ ಪರಾರಿಯಾಗಿದ್ದು ಪೊಲೀಸರ ನಿದ್ದೆಗೆಡಿಸಿದ್ದಾನೆ. ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ‌ ‌ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES