ಬೆಂಗಳೂರು: ಹುಟ್ಟುಹಬ್ಬದ ದಿನವೇ ಬಾಲಕನೋರ್ವ ಅಪಘಾತಕ್ಕೆ ಬಲಿಯಾದ ಘಟನೆ ಹೆಣ್ಣೂರು ಬಂಡೆ ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತ ಬಾಲಕನನ್ನು ಭಾನು ತೇಜ ಎಂದು ಗುರುತಿಸಲಾಗಿದ್ದು. ವೇದಗಳನ್ನು ಕಲಿಯಲು ಬೆಂಗಳೂರಿಗೆ ಬಂದಿದ್ದನು ಎಂದು ತಿಳಿದು ಬಂದಿದೆ.
ಚಿತ್ತೂರು ಮೂಲದ ರವಿ ಹಾಗೂ ಸುಮಾ ದಂಪತಿಯ ಪುತ್ರನಾಗಿದ್ದ ಭಾನು ತೇಜ ವೇದ ಕಲಿಯಲು ಎಂದು ಬೆಂಗಳೂರಿಗೆ ಬಂದಿದ್ದನು. ಕಳೆದ ಒಂದು ತಿಂಗಳಿಂದ ವೇದ ಕಲಿಯುತ್ತಿದ್ದ ಬಾಲಕ ಭಾನು ತೇಜಾ. ಆರ್.ಟಿ.ನಗರ ಸತ್ಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಮ್ಮ ಗುರುಗಳೊಂದಿಗೆ ವಾಸವಾಗಿದ್ದನು. ಆದರೆ ಹುಟ್ಟುಹಬ್ಬದ ಹಿನ್ನಲೆ ಅಕ್ಕದ ಮನೆಗೆ ಭಾನು ತೇಜ್ ಮನೆಗೆ ಹೋಗಿದ್ದನು.
ಇದನ್ನೂ ಓದಿ : ಕೆಪಿಸಿಸಿ ಅಧ್ಯಕ್ಷನಾಗಲು ನಾನು ಸಿದ್ದನಾಗಿದ್ದೇನೆ : ಕಾಂಗ್ರೆಸ್ನಲ್ಲಿ ಕೋಲಾಹಲ ಎಬ್ಬಿಸಿದ ರಾಜಣ್ಣ ಹೇಳಿಕೆ !
ಹೊರಮಾವುನಲ್ಲಿರುವ ಅಕ್ಕನ ಮನೆಗೆ ಬಂದಿದ್ದ ಭಾನುತೇಜ ಹುಟ್ಟುಹಬ್ಬ ಆಚರಿಸಿಕೊಂಡು ಆರ್.ಟಿ ನಗರದ ಕಡೆಗೆ ತನ್ನ ಅಣ್ಣ ಚಕ್ರಧರಣ್ ಜೊತೆ ಬೈಕ್ನಲ್ಲಿ ಬರುತ್ತಿದ್ದನು. ರಾತ್ರಿ 11.20ರ ಸಮಯದಲ್ಲಿ ಬೈಕ್ನಲ್ಲಿ ಬರುವ ವೇಳೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಬೈಕ್ಗೆ ಡಿಕ್ಕಿಯಾಗಿದ್ದು. ಬಾಲಕ ಭಾನು ತೇಜ್ ಮತ್ತು ಆತನ ಅಣ್ಣ ಬೈಕ್ನಿಂದ ಕೆಳಗೆ ಬಿದ್ದಿದ್ದನು, ಈ ವೇಳೆ ಭಾನು ತೇಜ್ ತಲೆಯ ಮೇಲೆ ಟ್ರಕ್ ಹರಿದಿದ್ದು. ಬಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಘಟನೆ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಾಲಿಕನ ಅಣ್ಣ ಚಕ್ರಧರಣ್ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು. ಘಟನೆ ಸಂಬಂಧ ಹೆಣ್ಣೂರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಿಸಕೊಂಡು ತನಿಖೆ ಆರಂಭಿಸಿದ್ದಾರೆ.