ಚಾಮರಾಜನಗರ : ಆಟವಾಡುತ್ತಿದ್ದ ಮಗುವಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದ್ದು. ಘಟನೆ ಸಂಬಂಧ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಶ್ರೀಧರ್ ಎಂಬುವರ ಮಗು ಸಾವನ್ನಪ್ಪಿದ್ದು. ಕೊಳ್ಳೇಗಾಲ ತಾಲ್ಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರತಿ ವರ್ಷವೂ ಕಬ್ಬು ಕಟಾವು ಮಾಡಲು ಈ ಕುಟುಂಬಗಳು ಬಳ್ಳಾರಿಯಿಂದ ಚಾಮರಾಜನಗರಕ್ಕೆ ಬರುತ್ತಿದ್ದರು. ಇಲ್ಲಿಗೆ ಬಂದ ಇವರು ಕನಿಷ್ಟ ಎರಡು ಮೂರು ತಿಂಗಳು ಇಲ್ಲೆ ವಾಸ್ತವ್ಯ ಹೂಡುತ್ತಿದ್ದರು.
ಇದನ್ನೂ ಓದಿ : ಕೆಟ್ಟ ಸೂ**ರ ಕಣ್ಣು ತೆಗೆದು ಬಿಡವ್ವ : MLC ಸೂರಜ್ ರೇವಣ್ಣ ದುರಂಹಕಾರಿ ಹೇಳಿಕೆ !
ಪ್ರತಿ ಭಾರಿಯಂತೆ ಈ ಬಾರಿಯು ಕಬ್ಬು ಕಟಾವು ಮಾಡಲು ಬಂದಿದ್ದ ಶ್ರೀ ಧರ್ ತಮ್ಮ 2 ವರ್ಷದ ಮಗುವನ್ನು ಕರೆದುಕೊಂಡು ಬಂದಿದ್ದರು. ತೇರಂಬಳ್ಳಿ ಗ್ರಾಮದ ಕುಳ್ಳೇಗೌಡ ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದರು. ಈ ವೇಳೆ ಶ್ರೀಧರ್ ಮಗು ಸೇರಿದಂತೆ ನಾಲ್ಕೈದು ಮಕ್ಕಳು ಕಬ್ಬಿನ ಗದ್ದೆಯಲ್ಲಿ ಆಟವಾಡುತ್ತಿದ್ದರು. ಈ ವೇಳೆ ಮಗುವಿಗೆ ಹಾವು ಕಚ್ಚಿ ಸಾವನ್ನಪ್ಪಿದೆ. ಘಟನೆ ಸಂಬಂಧ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.