Sunday, January 12, 2025

ಕಾಮಧೇನುವಿನ ಕೆಚ್ಚಲು ಕೊಯ್ದ ದುರುಳರು : ಸಂಸದ ಪಿ.ಸಿ ಮೋಹನ್​ ಸೇರಿದಂತೆ ಹಲವರಿಂದ ಆಕ್ರೋಶ !

ಬೆಂಗಳೂರು : ನಗರದಲ್ಲೊಂದು ಅಮಾನವೀಯ ಘಟನೆ ನಡೆದಿದ್ದು. ಹಾಲು ಕೊಡುವ ಕಾಮಧೇನುವಿನ ಕೆಚ್ಚಲನ್ನೆ ದುರುಳರು ಕೊಯ್ದು ಹಾಕಿದ್ದಾರೆ. ಘಟನೆ ಬಗ್ಗೆ ಹಿಂದು ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು. ಸಂಸದ ಪಿ.ಸಿ ಮೋಹನ್​ ಸ್ಥಳಕ್ಕೆ ಆಗಮಿಸಿ ದುರುಳರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು… ಯಾವ ಕಾಮಧೇನುವನ್ನು ಮಾತೆಯ ಸ್ವರೂಪವಾಗಿ ಕಾಣುತ್ತೇವೋ ಅದೇ ಕಾಮಧೇನುವಿನ ಕೆಚ್ಚಲನ್ನೆ ದುರುಳರು ಕೊಯ್ದುಹಾಕಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ನಡೆದಿದೆ. ಹಸುಗಳ ಮಾಲೀಕರು ಹಸುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ನೋವಿನಿಂದ ಹಸು ನಡೆಯಲು ಹಾಗದೆ ಪರದಾಡುತ್ತಾ ಕುಟುಂತ ಸಾಗಿದೆ.

ಇದನ್ನೂ ಓದಿ : ಯುವತಿ ಮೇಲೆ 60 ಮಂದಿಯಿಂದ 5 ವರ್ಷ ನಿರಂತರ ಅತ್ಯಾಚಾರ : 40 ಜನರ ವಿರುದ್ದ ಪೋಕ್ಸೋ ಕೇಸ್​​ ದಾಖಲು !

ಇತ್ತ ಹಸುಗಳನ್ನು ಚಾಮರಾಜಪೇಟೆಯ ಗೂಡ್ಸೆಡ್ ರಸ್ತೆಯಲ್ಲಿರುವ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದು. ರಕ್ತಸ್ರಾವ ನಿಲ್ಲಲು ಮತ್ತು ನೋವು ನಿವಾರಣೆಯಾಗಲು ಹಸುವಿಗೆ ಚುಚ್ಚುಮದ್ದು ನೀಡಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿರುವ ಶ್ರೀರಾಮ ಸೇನಾ ರಾಜ್ಯ ವಕ್ತಾರರು , ಮತ್ತು ಅಧ್ಯಕ್ಷರು ಈ ಕೃತ್ಯವನ್ನು ಮಾಡಿದ  ಜಿಹಾದಿ ಇಸ್ಲಾಂ ಕುನ್ನಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಗುಡುಗಿದ್ದಾರೆ.

ಸಂಸದ ಪಿ.ಸಿ ಮೋಹನ್​ ಆಕ್ರೋಶ !

ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಸದ ಪಿ.ಸಿ ಮೋಹನ್​ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ‘ ‘ ‘ ನಿನ್ನೆ ರಾತ್ರಿ ಚಾಮರಾಜಪೇಟೆ ಮೆನ್ಷನ್ ಮೌಲದಲ್ಲಿ ಅಮಾನವೀಯ ಘಟನೆ ನಡೆದಿದೆ. ಯಾರೋ ಕ್ರೂರಿ, ಮಾನವಿಯತೆ ಇಲ್ಲದವರು ಹಸುವಿನ ಕೆಚ್ಚಲನ್ನ ಕತ್ತರಿಸಿ ಹೋಗಿದ್ದಾರೆ. ಯಾರದೋ ಬೆಂಬಲದಲ್ಲಿ ಈ ರೀತಿ ಮಾಡಿರುವುದು ಜನರಲ್ಲಿ ಆತಂಇಕಕ್ಕೆ ಕಾರಣವಾಗಿದೆ. ಈ ಸ್ಥಳದಲ್ಲೆ ಸಿಸಿಟಿವಿ ಇಲ್ಲ, ನಾನು ಎಂಪಿ ಹಣದಲ್ಲಿ ಇಲ್ಲಿ ಸಿಸಿಟಿವಿ ಹಾಕಿಸ್ತೀನಿ.

ಯಾರು ಈ ಕೆಲಸ ಮಾಡಿದ್ದಾರೆ ಅವರಿಗೆ ತಕ್ಕ ಶಿಕ್ಷೆ ಆಗಬೇಕು, ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಲ್ಲಿ ಗಾಂಜಾ ಮಾರುತ್ತಿದ್ದಾರೆ. ಹೆಣ್ಣು ಮಕ್ಕಳು ಓಡಾಡಲು ಆಗೋದಿಲ್ಲ ಅಂತ ಜನರು ಹೇಳ್ತಾ ಇದ್ದಾರೆ, ಎಸಿಪಿ ಹತ್ರ ಮಾತನಾಡಿದ್ದೀನಿ… ಇದರ ಬಗ್ಗೆ ಮಾಹಿತಿ ಕೊಡಲು ಹೇಳಿದ್ದೀನಿ, ಅವರು ಬರುವವರೆಗೂ ನಾನು ಕಾಯ್ತೀನಿ

RELATED ARTICLES

Related Articles

TRENDING ARTICLES