ಭೋಪಾಲ್: ಲಿವಿಂಗ್ ರಿಲೇಷನ್ನಲ್ಲಿದ್ದ ಗೆಳತಿ ಮದುವೆಯಾಗು ಎಂದು ಪೀಡಿಸಿದಕ್ಕೆ ಕೋಪಗೊಂ ಯುವಕ ಯುವತಿಯನ್ನು ಕೊಲೆ ಮಾಡಿ 8 ತಿಂಗಳ ಕಾಲ ಶವವನ್ನು ಫ್ರಿಡ್ಜ್ನಲ್ಲಿಟ್ಟಿದ್ದ ಘಟನೆ ಮಧ್ಯಪ್ರದೇಶದ ದೇವಾಸ್‌ನಲ್ಲಿ ನಡೆದಿದೆ.
ಆರೋಪಿಯನ್ನು ಸಂಜಯ್ ಪಾಟಿದಾರ್ ಹಾಗೂ ಕೊಲೆಯಾದ ಲಿವ್ ಇನ್ ಗೆಳತಿಯನ್ನ ಪಿಂಕಿ ಪ್ರಜಾಪತಿ ಎಂದು ಗುರುತಿಸಲಾಗಿದೆ. ಸಂಜಯ್ ಪಾಟಿದಾರ್ ಬಾಡಿಗೆಗೆ ಪಡೆದಿದ್ದ ಮನೆಯ ಫ್ರಿಡ್ಜ್‌ನಲ್ಲಿ ಆಭರಣ ಧರಿಸಿ, ಸೀರೆಯುಟ್ಟ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ಜೂನ್ ತಿಂಗಳಲ್ಲೇ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ವಿಚಾರ ಪತ್ತೆಯಾಗಿದ್ದ ಹೇಗೆ ?
ಸಂಜಯ್ ಮತ್ತು ಪಿಂಕಿ ಕಳೆದ 2023ರಲ್ಲಿ ಸಂಜಯ್ ಧೀರೇಂದ್ರ ಶ್ರೀವಾಸ್ತವ ಎಂಬವರ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಕಳೆದ 2024ರ ಜೂನ್ನಲ್ಲಿ ಸಂಜಯ್ ಮನೆಯನ್ನು ಖಾಲಿ ಮಾಡಿಕೊಂಡು ಹೋಗಿದ್ದನು. ಇದೇ ವೇಳೆ ಯುವತಿಯನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಿಲಾಗಿದೆ.
ಸಂಜಯ್ ಕೊಲೆ ಮಾಡಿದ ಕೆಲ ದಿನಗಳಲ್ಲೆ ಮನೆಯಿಂದ ಕೊಳೆತ ದುರ್ವಾಸನೆ ಬರಲಾರಂಭಿಸಿದೆ. ಈ ವೇಳೆ ಈ ಬಗ್ಗೆ ಸ್ಥಳೀಯರು ಮನೆ ಮಾಲೀಕರಿಗೆ ತಿಳಿಸಿದ್ದಾರೆ. ಬಾಗಿಲು ತೆರೆದು ನೋಡಿದಾಗ ಫ್ರಿಡ್ಜ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಕೂಡಲೇ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ತಿಳಿಸಿದ್ದಾರೆ.