ಹಾಸನ : ತಮ್ಮನ ಹೆಂಡತಿಯೊಂದಿಗೆ ಅಕ್ರಮ ಸಂಬಂಧದಲ್ಲಿದ್ದ ಅಣ್ಣ, ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನು ಪರಲೋಕಕ್ಕೆ ಕಳುಹಿಸಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಸ್ವಂತ ಅಣ್ಣನಿಂದಲೆ ಕೊಲೆಯಾದ ದುರ್ದೈವಿಯನ್ನು ಆನಂದ್ ಎಂದು ಗುರುತಿಸಲಾಗಿದೆ.
ಹಾಸನ ತಾಲ್ಲೂಕಿನ, ಮುಕುಂದೂರು ಹೊಸಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಕೊಲೆಯಾದ ಆನಂದ್ ಮತ್ತು ಸೋಮಶೇಖರ್ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಆನಂದ್ ಕಳೆದ 10 ವರ್ಷದ ಹಿಂದೆ ಎಂ.ಕೆ ಅರ್ಚಿತ ಎಂಬಾಕೆಯ ಜೊತೆ ಮದುವೆಯಾಗಿದ್ದನು. ಆದರೆ ಕಳೆದ 3 ವರ್ಷದ ಹಿಂದೆ ಸೋಮಶೇಖರ್ನ ಹೆಂಡತಿ ಸಾವನ್ನಪ್ಪಿದ್ದಳು. ಇದರಿಂದಾಗಿ ಸೋಮಶೇಖರ್ ತಮ್ಮನ ಮನೆಯಲ್ಲೆ ಊಟ-ತಿಂಡಿ ಮಾಡುತ್ತಿದ್ದನು.
ಈ ವೇಳೆ ತಮ್ಮನ ಹೆಂಡತಿಯನ್ನು ಸೋಮಶೇಖರ್ ಬುಟ್ಟಿಗೆ ಬೀಳಿಸಿಕೊಂಡಿದ್ದನು. ಆಕೆಯ ಜೊತೆಗೆ ಅಕ್ರಮ ಸಂಬಂಧವನ್ನು ಹೊಂದಿದ್ದನು, ಈ ವಿಷಯವನ್ನು ತಿಳಿದಿದ್ದ ಆನಂದ ಇದರ ಕುರಿತು ಆಪ್ತರ ಬಳಿಯಲ್ಲಿ ತನ್ನ ದುಖಃವನ್ನು ನೋಡಿಕೊಂಡಿದ್ದನು. ಈ ವಿಷಯ ಹೊರಗೆ ಗೊತ್ತಾದರೆ ಮರ್ಯಾದೆ ಹಾಳಗುತ್ತದೆ ಎಂದು ಹೆದರಿದ್ದ ಆನಂದ್ ಪತ್ನಿಗೆ ಬುದ್ದಿ ಹೇಳಿ ಸಂಸಾರವನ್ನು ನಡೆಸಲು ಮುಂದಾಗಿದ್ದನು. ಈ ವಿಷಯದಿಂದ ಕೋಪಗೊಂಡ ಸೋಮಶೇಖರ್ ಮತ್ತು ಅರ್ಚಿತ ಆನಂದ್ನನ್ನು ಮುಗಿಸಲು ಪ್ಲಾನ್ ರೂಪಿಸಿದ್ದರು.
ಇದನ್ನೂ ಓದಿ : ಕೊಳವೆ ಬಾವಿಗೆ ಬಿದ್ದಿದ್ದ ನಾಯಿ ಮರಿ ರಕ್ಷಣೆ : ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ !
ಕೊಲೆ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಿದ್ದ ಸೋಮಶೇಖರ್ !
ಡಿಸೆಂಬರ್ 26ರಂದು ಆನಂದ್ ತನ್ನ ಬೈಕ್ಗೆ ಪೆಟ್ರೋಲ್ ಹಾಕಿಸಿಕೊಂಡು ಬರಲು ಹಂಗರಹಳ್ಳಿ ಗ್ರಾಮದ ಪೆಟ್ರೋಕ್ ಬಂಕ್ಗೆ ಹೋಗಿದ್ದನು. ಈ ವೇಳೆ ಬೇಕರಿಯಲ್ಲಿ ಮಕ್ಕಳಿಗೆ ತಿಂಡಿಯನ್ನು ಖರೀದಿಸಿ ಮನೆಗೆ ಹೋಗುತ್ತಿದ್ದ ಆನಂದ್ಗೆ ಅಣ್ಣ ಸೋಮಶೇಖರ್ ಕರೆ ಮಾಡಿದ್ದನು. ಕರೆ ಮಾಡಿ ಹೇಮಾವತಿ ನಾಲೆಯ ದಡದಲ್ಲಿ ಕಂಠಪೂರ್ತಿ ಕುಡಿಸಿದ ನಂತರ ತಮ್ಮನನ್ನು ನಾಲೆಗೆ ತಳ್ಳಿ ಸೋಮಶೇಖರ್ ಮನೆಗೆ ಬಂದಿದ್ದನು.
ನಾಪತ್ತೆಯಾಗಿದ್ದ ಆನಂದ್ಗಾಗಿ ಗೊರೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ದೂರನ್ನು ದಾಖಲಿಸಲಾಗಿತ್ತು, ಆದರೆಡಿ.28 ರಂದು ಹೊಳೆನರಸೀಪುರ ತಾಲ್ಲೂಕಿನ, ದೊಡ್ಡಕುಂಚೆವು ಗ್ರಾಮದ ಕೆರೆಯಲ್ಲಿ ಆನಂದ ಶವ ಪತ್ತೆಯಾಗಿತ್ತು. ಶವವನ್ನು ನೋಡಿದ ಸಂಬಂಧಿಕರು ಪತ್ನಿಯ ಅಕ್ರಮ ಸಂಬಂಧಕ್ಕೆ ಭೇಸತ್ತು ಆನಂದ್ ಆತ್ನಹತ್ಯೆ ಮಾಡಿಕೊಂಡಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈ ವೇಳೆ ಶವವನ್ನು ಮೇಲತ್ತಲು ಹಾಸನ ಸಂಸದರಿಗೆ ಕರೆ ಮಾಡಿ ನಾಲೆಗೆ ಹರಿಸುತ್ತಿದ್ದ ನೀರನ್ನು ನಿಲ್ಲಿಸಿ ಆನಂದ ಶವವನ್ನು ಮೇಲಕ್ಕೆತ್ತಿದ್ದರು.
ಇದನ್ನೂ ಓದಿ:ಆಧ್ಯಾತ್ಮ ಗುರುಗಳನ್ನು ಭೇಟಿ ಮಾಡಿದ ವಿರಾಟ್ ದಂಪತಿ : ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚಲಿದ್ದಾರೆ ಎಂದ ಫ್ಯಾನ್ಸ್
ಆನಂದ್ ಶವವನ್ನು ಮೇಲಕ್ಕೆತ್ತಿದ ನಂತರ ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಈ ವೇಳೆ ಅಲ್ಲಿಗೆ ಬಂದ ಹೆಂಡತಿ ಅರ್ಚಿತ ‘ ನಾವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದೇವೆ, ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಪೋಸ್ಟ್ ಮಾರ್ಟಮ್ ಮಾಡಬಾರದೆಂದು ಹಠ ಹಿಡಿದಿದ್ದಳು. ಈ ವರ್ತನೆಯಿಂದ ಪೊಲೀಸರು ಆಕೆಯ ಮೇಲೆ ಅನುಮಾನಗೊಂಡು ಪೋಸ್ಟ್ಮಾರ್ಟಂ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು.
ಆನಂದನ ಹನ್ನೊಂದನೆ ದಿನದ ಕಾರ್ಯ ಮುಗಿದ ನಂತರ ಅರ್ಚಿತ ಮತ್ತು ಸೋಮಶೇಖರ್ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರಿಗೆ ಆರೋಪಿಗಳು ನಡೆಸಿದ್ದ ಖತರ್ನಾಕ್ ಪ್ಲಾನ್ ಬೆಳಕಿಗೆ ಬಂದಿದ್ದು. ತಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಮ್ಮನನ್ನು ಕೊಲೆ ಮಾಡಿದ್ದಾಗಿ ಸೋಮಶೇಖರ್ ಒಪ್ಪಿಕೊಂಡಿದ್ದಾನೆ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಒಳ ಪಡಿಸಿದ್ದಾರೆ.