ಬೆಂಗಳೂರು : ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ ‘ ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು, ಆದರೆ ನಾನು ಡಿಕೆ. ಶಿವಕುಮಾರ್ ಅವರಿಗೆ ಸಲಹೆ ನೀಡುತ್ತೇನೆ, ಇನ್ನಿರುವ ಎರಡು ವರ್ಷಕ್ಕೆ ಯಾಕೆ ಫೈಟ್ ಮಾಡ್ತೀರ, 2028ಕ್ಕೆ ನಿಮ್ಮ ನೇತೃತ್ವದಲ್ಲಿ ಚುನಾವಣೆ ಆಗುತ್ತೆ, ಆಗ ನೀವು ಐದು ವರ್ಷವೂ ನೀವೆ ಸಿಎಂ ಆಗಿ, ಈಗ ಯಾಕೆ ಹೋರಾಟ ಮಾಡುತ್ತೀರ ಎಂದು ಹೇಳಿದರು.
ಇದನ್ನು ಓದಿ :ಆಸ್ತಿಗಾಗಿ ಹೆತ್ತ ತಂದೆ ತಾಯಿಯನ್ನೆ ಕೊ*ಲೆ ಮಾಡಿದ ಪಾಪಿ ಮಗ !
ಸಿಎಂಗಾಗಿ ಕಾಂಗ್ರೆಸ್ನಲ್ಲಿ ಹೋರಾಟಗಳು ನಡೆಯುತ್ತಿವೆ ಎಂಬುದನ್ನು ಬಿಚ್ಚಿಟ್ಟ ಕೆ,ಎನ್ ರಾಜಣ್ಣ ‘ ಸುಮ್ಮನೆ ಈಗ ಹೋರಾಟ ಮಾಡೋದನ್ನು ಬಿಟ್ಟು 2028ರ ಕಡೆ ಗಮನ ಹರಿಸಿ, ಸಿಎಂ ಆಗೋದೆಲ್ಲ ಹಣೆಬರಹ, ನಮಗೆ ಹೋಮ ಹವನದ ಮೇಲೆ ನಂಬಿಕೆ ಇಲ್ಲ, ಡಿ.ಕೆ ಶಿವಕುಮಾರ್ ಗೆ ದೇವರ ಮೇಲೆ ನಂಬಿಕೆ ಇದೆ, ಅದಕ್ಕೆ ಮಾಡಿಸಿರಬಹುದು, ನನ್ನ ಮೇಲೆಯೂ ಹಿಂದೆ ವಾಮಾಚಾರ ಮಾಡಿಸಿದ್ದರು, ಅದನ್ನು ನಾನು ಅನುಭವಿಸಿದ್ದೆ, ಆದರೆ ಅದನೆಲ್ಲಾ ನಾನು ನಂಬಲ್ಲ ಎಂದು ಹೇಳಿದರು.