Friday, January 10, 2025

ಮಹಾಕುಂಭ ಮೇಳಕ್ಕೆ ಸ್ಟೀವ್​ಜಾಬ್ಸ್​​ ಪತ್ನಿ ಆಗಮನ : ಪ್ರಯಾಗ್​ನಲ್ಲಿ ಎರಡು ವಾರ ವಾಸ್ತವ್ಯ !

ಪ್ರಯಾಗ್​ರಾಜ್ : ​ಇದೇ ತಿಂಗಳ ಜನವರಿ 13ರಿಂದ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಮಹಾ ಕುಂಭಮೇಳ ನಡೆಯಲಿದ್ದು. ಈ ಕುಂಭಮೇಳದಲ್ಲಿ ಜಗತ್ತಿನ ಶ್ರೀಮಂತ ಮಹಿಳೆ ಸ್ಟೀವ್​ ಜಾಬ್ಸ್​ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದ ಪ್ರಯಾಗ್​ರಾಜ್​ನಲ್ಲಿ ನಡೆಯುವ ಕುಂಭಮೇಳವು ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರು ಸೇರುವ ಧಾರ್ಮಿಕ ಸಂಗಮವಾಗಿದೆ. ಅದರಲ್ಲೂ ಈ ಭಾರಿಯ ಮಹಾಕುಂಭಮೇಳವು ಮತ್ತಷ್ಟು ವಿಶೇಷತೆಯನ್ನು ಪಡೆದುಕೊಂಡಿದೆ. ಈ ಕುಂಭಮೇಳಕ್ಕೆ ಪ್ರಪಂಚಾದ್ಯಂತದಿಂದ ಗಣ್ಯರು ಆಗಮಿಸುತ್ತಾರೆ. ಅದೇ ರೀತಿಯಾಗಿ ಈ ಬಾರಿಯ ಕುಂಭಮೇಳಕ್ಕೆ ವಿಶ್ವದ ಶ್ರೀಮಂತ ಮಹಿಳೆಯಾದ ಲಾರೆನ್ಸ್​ ಪೊವೆಲ್​ ಜಾಬ್ಸ್​ ಅವರು ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಒಂದೇ ಕುಟುಂಬದ ಐವರ ಭೀಕರ ಕೊ*ಲೆ : ಮಕ್ಕಳ ಮೃತದೇಹವನ್ನು ಬಾಕ್ಸ್​ನಲ್ಲಿ ತುಂಬಿದ ಕಿರಾತಕರು !

ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಅವರು ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಅವರ ಶಿಬಿರದಲ್ಲಿ ಸುಮಾರು 10 ದಿನಗಳ ಕಾಲ ತಂಗಲಿದ್ದಾರೆ ಮತ್ತು ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. ಲಾರೆನ್ಸ್ ಪೊವೆಲ್​ ಜಾಬ್ಸ್​ ಅವರ ಈ ಕ್ರಮವನ್ನು ಜಾಗತಿಕ ಮಟ್ಟದಲ್ಲಿ ಸನಾತನ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಪ್ರಚಾರದಲ್ಲಿ ಪ್ರಮುಖ ಸಂಕೇತವೆಂದು ಪರಿಗಣಿಸಲಾಗಿದೆ ಎಂದು ಮಾಹಿತಿ ದೊರತಿದೆ.

ಪ್ರಯಾಗ್​ರಾಜ್​ನಲ್ಲಿ ನಡೆಯುವ ಮಹಾಕುಂಭ ಮೇಳವು ವಿಶ್ವದ ಗಮನ ಸೆಳೆದಿದೆ. ಪ್ರತಿ ಭಾರಿ ನಡೆಯುವ ಕುಂಭಮೇಳಕ್ಕೆ ಲಕ್ಷಾಂತರ ಜನರು ವಿದೇಶದಿಂದ ಆಗಮಿಸಲಿದ್ದಾರೆ. ಅದೇ ರೀತಿಯಾಗಿ ಈ ಬಾರಿ ಲಾರೆನ್ಸ್​ ಪೊವೆಲ್​ ಜಾಬ್ಸ್​ ಅವರು ಆಗಮಿಸಲಿದ್ದಾರೆ. ಇದೇ ಜನವರಿ 13ರಿಂದ ಫೆಬ್ರವರಿ 26ರವರೆಗೆ ಮಹಾಕುಂಭ ಮೇಳ ನಡೆಯಲಿದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES