Friday, January 10, 2025

ಶಾಸಕ ದರ್ಶನ್​ ಪುಟ್ಟಣಯ್ಯ ಅವಾಜ್​ಗೆ ಬೆಚ್ಚಿ ಬಿದ್ದ ಹಾಸ್ಟೆಲ್​ ವಾರ್ಡನ್​ : ಕಾಲು ಕತ್ತರಿಸುವುದಾಗಿ ಬೆದರಿಕೆ

ಮಂಡ್ಯ : ಮೋರಾರ್ಜಿ ವಸತಿ ಶಾಲೆಗೆ ಶಾಸಕ ದರ್ಶನ್​ ಪುಟ್ಟಣಯ್ಯ ದಿಡೀರ್​ ಭೇಟಿ ನೀಡಿದ್ದು. ಹಾಸ್ಟೆಲ್​ನಲ್ಲಿ ವಾರ್ಡನ್​ ಇಲ್ಲದೆ ಇರುವುದನ್ನು ಕಂಡ ಶಾಸಕರು ವಾರ್ಡನ್​ಗೆ ಪೋನ್​ ಮಾಡಿ ತರಾಟೆಗೆ ತಗೆದುಕೊಂಡಿದ್ದಾರೆ.

ನಿನ್ನೆ (ಜ.09) ರಾತ್ರಿ ಪಾಂಡವಪುರದ ಕೆರೆತಣ್ಣೂರು ವಸತಿ ನಿಲಯಕ್ಕೆ ಶಾಸಕ ದರ್ಶನ್​​ ಪುಟ್ಟಣಯ್ಯ ದಿಡೀರ್​ ಭೇಟಿ ನೀಡಿದ್ದು. ಹಾಸ್ಟೆಲ್​ನಲ್ಲಿ ವಾರ್ಡನ್​ ಇಲ್ಲದೆ ಇರುವುದನ್ನು ನೋಡಿದ ಶಾಸಕ ದರ್ಶನ್​ ಪುಟ್ಟಣಯ್ಯ  ವಾರ್ಡನ್​ಗೆ ಪೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಹಾಸ್ಟೆಲ್​ನಲ್ಲಿದ್ದ ಮಕ್ಕಳು ವಾರ್ಡನ್​ ವಿರುದ್ದ ದೂರು ನೀಡಿದ್ದಾರೆ.

ಇದನ್ನೂ ಓದಿ : ವಿಶ್ವದ ಭವಿಷ್ಯ ನಿಂತಿರುವುದು ಯುದ್ಧದಲ್ಲಿ ಅಲ್ಲ, ಬುದ್ಧನಲ್ಲಿ : ನರೇಂದ್ರ ಮೋದಿ

ವಸತಿ ನಿಲಯಕ್ಕೆ ವಾರ್ಡನ್​ ಬರದೆ. ಆತನ ತಾಯಿಯಿಂದ ಕೆಲಸ ಮಾಡಿಸುತ್ತಿರುವುದಾಗಿ ತಿಳಿದ ದರ್ಶನ್​ ಪುಟ್ಟಣಯ್ಯ ‘ ವಾರ್ಡನ್​ ಆದವನಿಗೆ ಹಾಸ್ಟೆಲ್​ನಲ್ಲಿ ಇರಬೇಕಾದದು ಜವಬ್ದಾರಿ, ಅದನ್ನು ಬಿಟ್ಟು ನಿಮ್ಮ ತಾಯಿ ಹಾಸ್ಟೆಲ್​ನ್ನು ನೋಡಿಕೊಳ್ಳುತ್ತಿದ್ದಾರೆ. ನೀವೇನು ಫ್ಯಾಮಿಲಿ ಬಿಸಿನೆಸ್​ ಮಾಡಿಕೊಂಡಿದ್ದೀರ, ಮತ್ತೊಮ್ಮೆ ನೀನಾಗಲಿ ಅಥವಾ ನಿಮ್ಮ ಮನೆಯವರಾಗಲಿ ಹಾಸ್ಟೆಲ್​ಗೆ ಕಾಲು ಹಾಕಿದರೆ ಕಾಲು ಕತ್ತರಿಸುವುದಾಗಿ ಎಚ್ಚರಿಕೆ ನೀಡಿದರು. ಈ ವೇಳೆ ಮತ್ತೊಮ್ಮ ಈಗಾಗುವುದಿಲ್ಲ ಎಂದು ಮನವಿ ಮಾಡಿದರು.

RELATED ARTICLES

Related Articles

TRENDING ARTICLES