Friday, January 10, 2025

ಪೊಲೀಸರು ಆಧುನಿಕರಣಗೊಂಡಿದ್ದಾರೆ, ರಾಜ್ಯದಲ್ಲಿ ಕ್ರೈಂ ರೇಟ್​ ಕಡಿಮೆಯಾಗಿದೆ : ಪರಮೇಶ್ವರ್​

ಬೆಂಗಳೂರು :ಪುಲೀಕೇಶಿನನಗರದ ಪೊಲೀಸ್ ವಸತಿಗೃಹಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ  ಮಾತನಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ‘ ರಾಜ್ಯದ ಪೊಲೀಸರು ಮಾರ್ಡನೈಸ್​ ಆಗಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಕ್ರೈಂ ರೇಟ್​ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ನಗರದ ಪುಲಕೇಶಿ ನಗರದಲ್ಲಿ 128 ವಸತಿ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಪರಮೇಶ್ವರ್​ ‘ ಇವತ್ತು ಪೊಲೀಸ್ ಇಲಾಖೆಯಲ್ಲಿ, ಅದರಲ್ಲೂ ಬೆಂಗಳೂರಲ್ಲಿ ಒಂದು ರೀತಿಯಲ್ಲಿ ನೆನಪಿಸಿಕೊಳ್ಳೋ ಕಾರ್ಯಕ್ರಮ ಆಗಿದೆ. ಸುಮಾರು 60 ಕೋಟಿ ಖರ್ಚು ಮಾಡಿ ಕಟ್ಟಡ ನಿರ್ಮಿಸಿದ್ದಾರೆ. ಅದಕ್ಕೆ ಸಿದ್ದರಾಮಯ್ಯರನ್ನು ನಾನು ಅಭಿನಂದಿಸುತ್ತೇನೆ. ಪೊಲೀಸ್ ಇಲಾಖೆ ಒಂದು ರೀತಿ ಎಲ್ಲರಿಗೂ ಒಳ್ಳೆಯದ್ದು ಮತ್ತು ಕೆಟ್ಟದ್ದು
ಕೆಟ್ಟವರಿಗೆ ಪೊಲೀಸ್ ಕೆಟ್ಟದ್ದು, ಸಮಾಜವನ್ನ ಅರ್ಥ ಮಾಡ್ಕೊಂಡು, ಶಿಸ್ತು ಪಾಲಿಸೋವರಿಗೆ ಪೊಲೀಸ್ ಒಳ್ಳೆಯವರು. ಇಡೀ ದೇಶದಲ್ಲಿ ಉತ್ತಮ ಪೊಲೀಸ್ ಅಂದ್ರೆ ಅದು ಕರ್ನಾಟಕ ಪೊಲೀಸ್ ಎಂದು ಹೇಳಿದರು.

ಇದನ್ನೂ ಓದಿ:ಕೊಟ್ಟ ಹಣವನ್ನು ವಾಪಾಸ್​ ಕೇಳಿದ ಸ್ನೇಹಿತನಿಗೆ ಚಾಕು ಇರಿದ ಗೆಳೆಯ !

ಕರ್ನಾಟಕ ಪೊಲೀಸರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ.  ಅದಕ್ಕೆ ಸೌಕರ್ಯ ಕೊಡಬೇಕಾದದ್ದು ಸರ್ಕಾರದ ಕರ್ತವ್ಯ, ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಅನೇಕ ಯೋಜನೆ ಕೊಟ್ಟಿದ್ದಾರೆ, ಪೊಲೀಸ್ ಮನೆಗಳು ತುಂಬಾ ಕೆಟ್ಟದಾಗಿ ಇದ್ವು, ಇವತ್ತು ಕೂಡ ಇವೆ, ಅದನ್ನ ಬದಲಾವಣೆ ಮಾಡುತ್ತೇವೆ, ಪೊಲೀಸರು ವಾಸ ಮಾಡೋಕೆ ಯೋಗ್ಯ ಇರೋ ಮನೆ ಕಟ್ಟೋಕೆ ಶುರು ಮಾಡಿದ್ವಿ, ಸುಮಾರು 46% ಪೊಲೀಸರಿಗೆ ಮನೆ ಕಟ್ಟಿದ್ದೇವೆ, ಇವೇ ಮನೆ ಪ್ರೆಸ್ಟಿಜ್ ನವರು ಕಟ್ಟಿದ್ದರೆ ಕನಿಷ್ಠ ನಾಲ್ಕು ಕೋಟಿ ಚಾರ್ಚ್ ಮಾಡುತ್ತಿದ್ದರು. ಆದರೆ ನಮ್ಮ ಇಲಾಖೆಯವರು 25 ಲಕ್ಷಕ್ಕೆ ಕಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಇಂತಹ 46 ಸಾವಿರ ಕ್ವಾರ್ಟರ್ಸ್​ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು.

ನಮ್ಮ ಪೊಲೀಸರು ಹೆಚ್ಚು ಮಾರ್ಡನೈಜ್​ ಆಗಿದ್ದಾರೆ !

ಮುಂದುವರಿದು ಮಾತನಾಡಿದ ಪರಮೇಶ್ವರ್​ ‘ ನಮ್ಮ ಪೊಲೀಸರು ಮಾಡರ್ನೈಜ್​ ಆಗಿದ್ದಾರೆ. ಎಲ್ಲಾ ಪೊಲೀಸ್​ ಠಾಣೆಗಳು ಆಧುನಿಕರಣಗೊಳ್ಳುತ್ತಿವೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿವೆ. ಇದನ್ನೂ ನೋಡಿದರೆ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯುತ್ತದೆ.

ಆದರೆ ಇತ್ತೀಚೆಗೆ ರಾಜ್ಯದಲ್ಲಿ ಸೈಬರ್​ ಕ್ರೈಂ ಸಂಖ್ಯೆ ಹೆಚ್ಚಾಗುತ್ತಿವೆ. ಅದನ್ನೂ ಕಡಿಮೆ ಮಾಡುತ್ತೇವೆ. ಬ್ಯಾಂಕ್ ಫ್ರಾಡ್, ಡೇಟಾ  ಕಳ್ಳತನ ಮಾಡುತ್ತಿದ್ದಾರೆ, ಆದರೆ ಇಂತಹ ಪ್ರಕರಣಗಳೂ ಕಡಿಮೆಯಾಗಿದೆ. ಬೆಂಗಳೂರಲ್ಲಿ ಮಹಿಳೆಯರು, ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಮಹಿಳೆಯರ ಸುರಕ್ಷತೆಗಾಗಿ 650 ಕೋಟಿ ಖರ್ಚಿನಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ. ಇಡೀ ಸಿಟಿಯಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಸಲಾಗಿದೆ.  ಹೊಸವರ್ಷದಲ್ಲಿ ಒಂದು ಸಣ್ಣ ಘಟನೆ ಇಲ್ಲದೇ ಈ ಬಾರಿಯ ಸೆಲಬ್ರೇಷನ್​ ಮುಗಿದಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES