Thursday, January 9, 2025

ರೋಡ್​ ರೇಜ್​ ಕೇಸ್​ : ಕ್ಯಾಬ್​ ಚಾಲಕನನ್ನು ಫಾಲೋ ಮಾಡಿ ಹಲ್ಲೆ ಮಾಡಿದ ಯುವಕರು !

ಬೆಂಗಳೂರು : ರಾಜಧಾನಿಯಲ್ಲಿ ಮತ್ತೊಂದು ರೋಡ್​ ರೇಜ್ ಕೇಸ್​ ನಡೆದಿದ್ದು. ಕಾರಿನ ಚಾಲಕನನ್ನು ಹಿಂಬಾಲಿಸಿಕೊಂಡು ಬಂದ ಯುವಕರ ಗುಂಪು ಕಾರಿನ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಮಾಹಿತಿ ದೊರೆತಿದೆ.

ಬೆಂಗಳೂರಿನ, ಕೋರಮಂಗಲದ ಬಳಿಯಲ್ಲಿ ಘಟನೆ ನಡೆದಿದ್ದು. ಕ್ಯಾಬ್​ನ್ನು ಫಾಲೋ ಮಾಡಿಕೊಂಡು ಬಂದ ಪುಂಡ ಯುವಕರ ಗುಂಪು ಕಾರಿನ ಬ್ಯಾನೆಟ್​ ಮೇಲೆ ಹತ್ತಿ ಏಕಾಏಕಿ ಹಲ್ಲೆಗೆ ಯತ್ನಿಸಿದ್ದಾರೆ. ಯುವಕರ ಪುಂಡಾಟದಿಂದ ಕಾರಿಗೆ ಡ್ಯಾಮೇಜ್​ ಆಗಿರುವುದು ಕಂಡು ಬಂದಿದೆ.

ಇದನ್ನೂ ಓದಿ : ಮಾಟ ಮಂತ್ರ ಮಾಡುತ್ತಾಳೆ ಎಂದು ಸ್ವಂತ ಚಿಕ್ಕಮ್ಮನನ್ನೆ ಕೊ*ಲೆ ಮಾಡಿದ ಭೂಪ !

ಘಟನೆ ಬಗ್ಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಘಟನೆಯ ಸಂಪೂರ್ಣ ವಿಡಿಯೋ ಮತ್ತೊಂದು ಕಾರಿನ ಡ್ಯಾಶ್​ ಬೋರ್ಡ್​ನಲ್ಲಿ ರೆಕಾರ್ಡ್​ ಆಗಿದ್ದು. ಇದರ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರಾ ಎಂಬ ಬಗ್ಗೆ ಇನ್ನಷ್ಟೆ ಮಾಹಿತಿ ದೊರಕಬೇಕಿದೆ.

 

RELATED ARTICLES

Related Articles

TRENDING ARTICLES