Thursday, January 9, 2025

KSRTC ಬಸ್​ ಮತ್ತು ಬೈಕ್​ ನಡುವೆ ಭೀಕರ ಅಪಘಾತ : ಇಬ್ಬರು ಸಾ*ವು !

ಮಂಡ್ಯ : ದ್ವಿಚಕ್ರ ವಾಹನ ಮತ್ತು KSRTC ಬಸ್​ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯದ ಮಳವಳ್ಳಿಯ ಪಂಡಿತಹಳ್ಳಿ ಬಳಿ ದುರ್ಘಟನೆ ಸಂಭವಿಸಿದ್ದು. KSRTC ಬಸ್​ಗೆ ಬೈಕ್​ಗೆ ಡಿಕ್ಕಿಯಾಗಿ ಬೈಕ್​ ಸವಾರರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಮೃತರನ್ನು ಮಳವಳ್ಳಿಯ ಮಂಚನಹಳ್ಳಿ ಗ್ರಾಮದ ದೊಡ್ಡ  64 ವರ್ಷದ ಮಾದಯ್ಯ ಮತ್ತು 52 ವರ್ಷದ ನಾಗಸ್ವಾಮಿ ನಾಗಸ್ವಾಮಿ ಎಂದು ಗುರುತಿಸಲಾಗಿದೆ. ಮೃತರಿಬ್ಬರು ತಮ್ಮ ಗ್ರಾಮದಿಂದ ಮಳವಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಅವಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ರಾಕಿ ಭಾಯ್ ಹುಟ್ಟುಹಬ್ಬಕ್ಕೆ ಟ್ವಿಟ್​ ಮಾಡಿ ಶುಭಕೋರಿದ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ !

ಮೃತದೇಹಗಳನ್ನು ಮಳವಳ್ಳಿ ಗ್ರಾಮದ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿದ್ದು. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES