Thursday, January 9, 2025

ನಕ್ಸಲಿಸಂ ಬಿಟ್ಟು ಪೊಲೀಸ್​ ಇಲಾಖೆ ಸೇರಿದ್ದ ಐದು ನಕ್ಸಲರು ಭೀಕರ ಬಾಂಬ್​ ಸ್ಪೋ*ಟದಲ್ಲಿ ಸಾ*ವು !

ಛತ್ತೀಸಗಡ್​ : ಎರಡು ದಿನದ ಹಿಂದೆ ಛತ್ತೀಸಗಡದಲ್ಲಿ ನಡೆದ ಭೀಕರ ನೆಲಬಾಂಬ್​ ಸ್ಪೋಟದಲ್ಲಿ ನಕ್ಸಲ್​ ವಿರುದ್ದದ ಕಾರ್ಯಚರಣೆ ಮುಗಿಸಿಕೊಂಡು ಬರುತ್ತಿದ್ದ 8 ಜನ ಪೊಲೀಸರು ಸಾವನ್ನಪ್ಪಿದ್ದರು. ಈ 8 ಜನರಲ್ಲಿ ಐವರು ಮಾಜಿ ನಕ್ಸಲರಿದ್ದು ಸಮಾಜದ ಮುಖ್ಯ ವಾಹಿನಿಯಿಂದ ಹೊರ ಬಂದು ಪೊಲೀಸ್​ ಪಡೆಗೆ ಸೇರಿದ್ದ ಐವರು ಸಾವನ್ನಪ್ಪಿದ್ದಾರೆ.

ಛತ್ತೀಸಗಡದ ಬಿಜಾಪುರದಲ್ಲಿ ನಡೆದ ಭೀಕರ ಸ್ಫೋಟದಲ್ಲಿ ಮೃತಪಟ್ಟ 8 ಮಂದಿ ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲರಿದ್ದರು ಎಂದು ತಿಳಿದು ಬಂದಿದೆ. ನಕ್ಸಲಿಸಂ ತೊರೆದು ಬಂದು ಮುಖ್ಯ ವಾಹಿನಿಯಲ್ಲಿ ಜೀವನ ನಡೆಸುತ್ತಿದ್ದ ಇವರು ಪೊಲೀಸ್​ ಪಡೆಗೆ ಸೇರ್ಪಡೆಯಾಗಿದ್ದರು. ಆದರೆ ಎರಡು ದಿನದ ಹಿಂದೆ ನಡೆದ ಭೀಕರ ದುರಂತದಲ್ಲಿ ಇವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ :ಕಾಂಗ್ರೆಸ್​​ ಸರ್ಕಾರದಲ್ಲಿ ಉಗ್ರರಿಗೆ-ನಕ್ಸಲರಿಗೆ ಸುಗ್ಗಿ ಕಾಲವಿದೆ : ಸುನೀಲ್​ ಕುಮಾರ್​

ಜಿಲ್ಲಾ ರಿಸರ್ವ್​ ಗಾರ್ಡ್​ಗೆ(DRG) ಸೇರಿದ ಗೆಡ್​ ಕಾನ್ಸ್​ಟೇಬಲ್​ ಬುಧ್ರಾಮ್​ ಕೋರ್ಸಾ, ಕಾನ್ಸ್​ಟೇಬಲ್​ಗಳಾದ  ಡುಮ್ಮಾ ಮರ್ಕಮ್​, ಪಂಡರು ರಾಮ್, ಬಮನ್​ಸೋಧಿ, ಮತ್ತು ಬಸ್ತಾರ್​​ ಫೈಟರ್ಸ್​ನ  ಕಾನ್ಸಟೇಬಲ್​ ಸೋಮದು ವಟ್ಟಿ ಅವರು ಈ ಹಿಂದೆ ನಕ್ಸಲೈಟ್​ಗಳಾಗಿ ಸಕ್ರಿಯರಾಗಿದ್ದರು. ಶರಣಾದ ನಂತರ ಪೊಲೀಸ್​ ಪಡೆಗೆ ಸೇರಿಸಿಕೊಳ್ಳಲಾಗಿತ್ತು ಎಂದು ಬಸ್ತಾರ್​ ವ್ಯಾಪ್ತಿಯ ಹಿರಿಯ ಪೊಲೀಸ್​ ಅಧಿಕಾರಿ ಸುಂದರ್​ ರಾಜ್​ ಖಾಸಗಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಕಳೆದ 7 ವರ್ಷಗಳ ಹಿಂದೆ ಬಸ್ತಾರ್​ ಪ್ರದೇಶದಲ್ಲಿ 792 ನಕ್ಸಲರು ಶರಣಾಗಿದ್ದರು, ಅವರಲ್ಲಿ ಇವರು ಕೂಡ ಶರಣಾಗಿದ್ದರು ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES