Wednesday, January 8, 2025

ಚಹಲ್​-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು : ಡಿವೋರ್ಸ್​ಗೆ ಮುಂದಾದ ದಂಪತಿಗಳು ?

ಮುಂಬೈ: ಟೀಂ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ನಡುವಿನ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದ್ದು, ಶೀಘ್ರವೇ ಡಿವೋರ್ಸ್‌ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಇನ್ನಷ್ಟೆ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.

ಭಾರತದ ಖ್ಯಾತ ಜೋಡಿಗಳಲ್ಲಿ ಒಬ್ಬರಾಗಿದ್ದ ಚಹಲ್ ಮತ್ತು ಧನಶ್ರೀ 2020ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದರು. ಇವರಿಬ್ಬರು 2 ವರ್ಷದ ಹಿಂದೆಯೇ ಬ್ರೇಕಪ್​ ಮಾಡಿಕೊಳ್ಳುತ್ತಾರೆ ಎಂದು ಹಿಂದೆಯೆ ಸುದ್ದಿ ಪ್ರಕಟವಾಗಿತ್ತು. ಆದರೆ ಅದರ ನಂತರ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದರು.

ಇದನ್ನೂ ಓದಿ:ಮದುವೆ ಹೆಸರಲ್ಲಿ ದೋಖಾ : ಗಂಡನಿಗೆ ಪಂಗನಾಮ ಹಾಕಿ ಎಸ್ಕೇಪ್​ ಆದ ಹೆಂಡತಿ !

ಆದರೆ ಇತ್ತೀಚಿನ ಕೆಲವು ವರದಿಗಳ ಪ್ರಕಾರ ಇಬ್ಬರು ಪ್ರತ್ಯೇಕವಾಗುತ್ತಿರುವುದು ಸ್ಪಷ್ಟವಾಗಿದ್ದು. ಎಲ್ಲಾ ಷರತ್ತುಗಳು ಪೂರ್ಣಗೊಂಡ ನಂತರ ಇದರ ಬಗ್ಗೆ ಅಧಿಕೃತ ಘೊಷಣೆ ಮಾಡುವ ಸಾಧ್ಯೆತೆ ಇದೆ ಎನ್ನಲಾಗಿದೆ. ಇಬ್ಬರು ಪ್ರತ್ಯೇಕವಾಗಲು ನಿಖರವಾದ ಕಾರಣ ಇಲ್ಲಿಯವರೆಗೂ ತಿಳಿದು ಬಂದಿಲ್ಲ. ಆದರೆ ದಂಪತಿ ಪ್ರತ್ಯೇಕವಾಗಿ ತಮ್ಮ ಜೀವನವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಈ ವದಂತಿಗೆ ಪೂರಕ ಎಂಬಂತೆ ಇಬ್ಬರೂ ಇನ್‌ಸ್ಟಾದಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ. ಚಹಲ್‌ ಅವರು ಧನಶ್ರೀ ಜೊತೆಗಿನ ಫೋಟೋ ಡಿಲೀಟ್‌  ಮಾಡಿದ್ದರೆ ಧನಶ್ರೀ ಚಹಲ್‌ ಅವರೊಂದಿಗೆ ಫೋಟೋ ಡಿಲೀಟ್‌ ಮಾಡಿಲ್ಲ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES