Tuesday, January 7, 2025

ಜಗತ್ತಿಗೆ ಮತ್ತೊಂದು ವೈರಸ್​ ಶಾಕ್​: ಚೀನಾದಲ್ಲಿ ಹೊಸ ವೈರಸ್​​ ಉಗಮ

ಕೋವಿಡ್ -19 ವೈರಸ್​ ಜಗತನ್ನು ಅಕ್ಷರಶಃ ನಡುಗಿಸದ ವೈರಸ್​​ ಆಗಿದ್ದು. ಈ ವೈರಸ್​ನ ಜನಕ ಚೀನಾ ಎಂದು ವಿಶ್ವವೆ ಒಪ್ಪಿಕೊಂಡಿದೆ. ಕೆಲವರು ಇದನ್ನು ಚೀನಾ ಪ್ರಪಂಚದ ಮೇಲೆ ನಡೆಸಿದ ಬಯೋ ವಾರ್​ ಎಂದು ಬಣ್ಣಿಸಿದ್ದರು. ಆದರೆ ಈ ವೈರಸ್​ ಹೊಡೆತಕ್ಕೆ ಇಡೀ ಪ್ರಪಂಚ ಯುದ್ದಭೂಮಿಯಾಗಿ ಬದಲಾಗಿದ್ದಂತು ಸತ್ಯ ಎನ್ನಬಹುದು.

ಕೋವಿಡ್​-19ನಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರೆ, ಕೋಟ್ಯಾಂತರ ಕುಟುಂಬಗಳು ಬೀದಿಪಾಲಾದವು. ಇನ್ನು ಆರ್ಥಿಕತೆಯ ವಿಷಯವನ್ನು ಕೇಳುವುದೇ ಬೇಡ, ವಿಶ್ವದ ದೊಡ್ಡಣ ಎಂದೆನಿಸಿಕೊಳ್ಳುವ ಅಮೇರಿಕಾ ಕೂಡ ಈ ವೈರಸ್​ ಎದುರು ಮಂಡಿ ಊರುವಂತಾಯಿತು. ಈ ವೈರಸ್​ ಭಾದೆಯಿಂದ ಜನರು ನಿಧಾನವಾಗಿ ಹೊರಗೆ ಬರುವ ವೇಳೆಗೆ ಮತ್ತೊಂದು ಆಘಾತಕಾರಿ ವರದಿ ಹೊರಗೆ ಬಂದಿದ್ದು. 5 ವರ್ಷದ ಬಳಿಕ ಚೀನಾದಲ್ಲಿ ಮತ್ತೊಂದು ಮಾರಕ ವೈರಸ್​ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಯಾವುದಿದು ಹೊಸ ವೈರಸ್​ !

ಚೀನಾ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಎಂಬ ವೈರಸ್ ಈಗ ದೊಡ್ಡ ತಲೆನೋವಾಗುವ ಎಲ್ಲಾ ಲಕ್ಷಣ ತೋರಿಸಿದೆ. ಚೀನಾ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವ ಪೋಸ್ಟ್‌ಗಳು ಈ ವೈರಸ್ ವೇಗವಾಗಿ ಹರಡುತ್ತಿರುವುದನ್ನು ಖಚಿತಪಡಿಸಿದೆ. ಆಸ್ಪತ್ರೆಗಳು ಭರ್ತಿಯಾಗಿದ್ದರೆ ಸ್ಮಶಾನಗಳಲ್ಲಿ ಕೂಡ ಹೆಣಗಳ ಸಂಖ್ಯೆ ಹೆಚ್ಚಿರುವುದನ್ನು ಅನೇಕ ಪೋಸ್ಟ್‌ಗಳು ತಿಳಿಸಿವೆ.

ಇದನ್ನೂ ಓದಿ : ಸಿದ್ದಗಂಗಾ ಮಠಕ್ಕೆ ಡಾಲಿ ಭೇಟಿ : ಗದ್ದುಗೆಗೆ ಪೂಜೆ ಸಲ್ಲಿಸಿದ ಧನಂಜಯ್​ !

ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು, ಇನ್‌ಫ್ಲುಯೆನ್ಸ A, ಹೆಚ್‌ಎಂಪಿವಿ, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್-19 ಸೇರಿದಂತೆ ಅನೇಕ ವೈರಸ್‌ಗಳು ಹರಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ವೈರಸ್ 14 ವರ್ಷದ ಒಳಗಿನ ಮಕ್ಕಳಿಗೆ ಹೆಚ್ಚು ಹಾನಿಕಾರಕ ಎಂದು ತಿಳಿದು ಬಂದಿದೆ.

ಈ ವೈರಸ್​ ಹರಡುವಿಕೆಯನ್ನು ತಡೆಗಟ್ಟಲು ಚೀನಾ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ ಎಂದು ತಿಳಿದು ಬಂದಿದ್ದರು. ಇದರ ಬಗ್ಗೆ ಚೀನಾ ಇನ್ನು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಈ ಸಾಮಾಜಿಉಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ಹಲ್ಲೆಗಳೆಯಲು ಸಾಧ್ಯವಿಲ್ಲ ಎಂಬುದಂತು ನಿಜ .

RELATED ARTICLES

Related Articles

TRENDING ARTICLES