Tuesday, January 7, 2025

ಸಿದ್ದಗಂಗಾ ಮಠಕ್ಕೆ ಡಾಲಿ ಭೇಟಿ : ಗದ್ದುಗೆಗೆ ಪೂಜೆ ಸಲ್ಲಿಸಿದ ಧನಂಜಯ್​ !

ತುಮಕೂರು : ನಟ ಡಾಲಿ ಧನಂಜಯ್​ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದು. ಶಿವಕುಮಾರ್​ ಸ್ವಾಮೀಜಿಗಳ ಗದ್ದುಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡಾಲಿ ಧನಂಜಯ್​ ಅವರ ವಿವಾಹ ಫೆಬ್ರವರಿ 16ರಂದು ಮೈಸೂರಿನಲ್ಲಿ ನಡೆಯಲಿದೆ. ಚಿತ್ರದುರ್ಗದ ಧನ್ಯತಾ ಅವರ ಕೈ ಹಿಡಿಯಲಿದ್ದಾರೆ. ಇದರ ಬೆನ್ನಲ್ಲೆ ನಟ ಡಾಲಿ ಮತ್ತು ಅವರ ಮಾಜಿ ಪತ್ನಿ ಇಬ್ಬರು ತಮ್ಮ ಮದುವೆಯ ಆಮಂತ್ರಣ ಪತ್ರವನ್ನು ಅನೇಕ ಗಣ್ಯರಿಗೆ ನೀಡುತ್ತಿದ್ದಾರೆ.

ಇದನ್ನೂ ಓದಿ:‘ಸರಿಗಮಪ’ ಕಾರ್ಯಕ್ರಮದ ಜ್ಯೂರಿ ಎಸ್​. ಬಾಲಿ ನಿಧನ !

ಇದರ ಬೆನ್ನಲ್ಲೆ ಇಂದು ಡಾಲಿ ಧನಂಜಯ್​ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದು. ಶಿವಕುಮಾರ್ ಸ್ವಾಮೀಜಿಗಳ ಗದ್ದುಗೆಗೆ ಮದುವೆಯ ಆಹ್ವಾನ ಪತ್ರಿಕೆಯನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸಿದ ನಂತರ ಸಿದ್ದಲಿಂಗಾ ಸ್ವಾಮೀಜಿಗಳನ್ನು ಭೇಟಿಯಾಗಿ ಮದುವೆ ಪತ್ರಿಕೆ ನೀಡಿ ಆರ್ಶೀವಾದ ಪಡೆದಿದ್ದಾರೆ. ಈ ವೇಳೆ ಪುನೀತ್​ ರಾಜ್​ಕುಮಾರ್​ ಅವರು ಮಠಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. ಈ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.

RELATED ARTICLES

Related Articles

TRENDING ARTICLES