Sunday, January 5, 2025

ಹುಟ್ಟುಹಬ್ಬಕ್ಕೆ ಊರಲ್ಲಿ ಇರಲ್ಲ ಎಂದ ಯಶ್​ : ಕಳೆದ ವರ್ಷದ ದುರ್ಘಟನೆಯನ್ನು ಮರೆತಿಲ್ಲವೆ ರಾಕಿಭಾಯ್​

ಬೆಂಗಳೂರು : ರಾಕಿಂಗ್​ ಸ್ಟಾರ್​ ಯಶ್​ ಅವರು ಈ ಬಾರಿಯ ಹುಟ್ಟುಹಬ್ಬಕ್ಕೆ ತಮ್ಮ ಅಭಿಮಾನಿಗಳೊಂದಿಗೆ ಇರೋದಿಲ್ಲ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದು. ಸಿನಿಮಾ ಶೂಟಿಂಗ್ ಇರುವುದರಿಂದ ತಾವು ಊರಿನಲ್ಲಿ ಇರೋದಿಲ್ಲ ಎಂದು ತಿಳಿಸಿದ್ದಾರೆ.

ಜನವರಿ 08ಕ್ಕೆ ನಟ ಯಶ್​ ಅವರ ಹುಟ್ಟುಹಬ್ಬವಿದ್ದು. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಹುಟ್ಟಹಬ್ಬವನ್ನು ಆಚರಿಸಲು ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದ್ದರು. ಆದರೆ ಇದರ ನಡುವೆ ನಟ ಯಶ್​ ಅವರ ಈ ನಡೆ ಅವರ ಅಭಿಮಾನಿಗಳಿಗೆ ಕೊಂಚ ಇರಿಸು ಮುರಿಸು ಉಂಟು ಮಾಡುವ ಸಾಧ್ಯತೆ ಇದೆ.

ಕಳೆದ ವರ್ಷ ನಡೆದ ದುರ್ಘಟನೆ ನೆನಪಿನಲ್ಲಿರುವ ನಟ ಯಶ್​ !

ಕಳೆದ ವರ್ಷ ಯಶ ಹುಟ್ಟುಹಬ್ಬದಂದು ಅಭಿಮಾನಿಯೊಬ್ಬ ಬ್ಯಾನರ್​ ಕಟ್ಟುವ ವೇಳೆ ಕರೆಂಟ್​ ಶಾಕ್​ ತಗುಲಿ ಸಾವನ್ನಪ್ಪಿದ್ದ. ಈ ಘಟನೆಯಿಂದ ನಟ ಯಶ್​ ಕೂಡ ಸಾಕಷ್ಟು ದುಃಖಿತರಾಗಿದ್ದರು. ಅಂದು ಸಾವನ್ನಪ್ಪಿದ್ದ ಅಭಿಮಾನಿಯ ಮನೆಗೆ ಭೇಟಿ ನೀಡಿದ ಯಶ್​ ಅವರ ಕುಟುಂಬಕ್ಕೆ ಸಾತ್ವಾಂನ ಹೇಳಿ. ಮುಂದೆ ಯಾರೂ ಸಹ ಇಂತಹ ಕಾರ್ಯಕ್ಕೆ ಕೈ ಹಾಕದಂತೆ ಕೋರಿಕೊಂಡಿದ್ದರು.

ಇಂದು ಅವರು ಬರೆದಿರುವ ಪತ್ರದಲ್ಲಿಯೂ ಅವರ ಕಳಕಳಿ ಎದ್ದು ಕಾಣುತ್ತಿದ್ದು. ಫ್ಲೆಕ್ಸ್​, ಬ್ಯಾನರ್​ನಂತಹ ಆಡಂಬರದ ಆಚರಣೆಗೆ ಕೈ ಹಾಕದೆ. ನಿಮ್ಮ ಕುಟುಂಬ ಹೆಮ್ಮೆ ಪಡುವಂತ ಕೆಲಸ ಮಾಡಿ. ಅದೇ ನೀವು ನನಗೆ ಕೊಡುವ ದೊಡ್ಡ ಉಡುಗೊರೆ ಎಂದು ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES