Sunday, January 5, 2025

ನೇಣು ಬಿಗಿದುಕೊಳ್ಳಲು ಹೋದ ವ್ಯಕ್ತಿ ಹಗ್ಗ ತುಂಡಾಗಿ ಬಿದ್ದು ಸಾ*ವು !

ಉಡುಪಿ: ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಳ್ಳಲು ಹೋದ ವ್ಯಕ್ತಿ ಹಗ್ಗ ತುಂಡಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯ ಮಣಿಪಾಲ್​ನಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮಿಲ್ರಾಯ್​ ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲೆಯ ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ಘಟನೆ ನಡೆದಿದೆ. 55 ವರ್ಷದ ಮಿಲ್ರಾಯ್​ ಎಂಬಾತ ಮನೆಯ ಮೊದಲ ಅಂತಸ್ತಿನ ಮೇಲ್ಚಾವಣಿಗೆ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾನೆ. ಕುಣಿಕೆಗೆ ಕತ್ತನ್ನು ನೀಡಿ ಕೆಳಗೆ ದುಮುಕಿದ್ದಾನೆ. ಆದರೆ ಕುಣುಕೆಯಲ್ಲಿ ನರಳಾಡುವ ವೇಳೆ ನಿಯಂತ್ರಣ ಸಿಗದೆ ಹಗ್ಗ ತುಂಡಾಗಿದೆ.

ಇದನ್ನೂಓದಿ :ಶೋಕಾಚರಣೆ ಸಂದರ್ಭದಲ್ಲಿ ರಾಹುಲ್​ ವಿಯೆಟ್ನಾಂ ಪ್ರವಾಸ : ಕಾಂಗ್ರೆಸ್​ ಮೇಲೆ ಮುಗಿಬಿದ್ದ BJP ! 

ಸುಮಾರು 20 ಅಡಿ ಎತ್ತರದಿಂದ ಹಗ್ಗ ತುಂಡಾಗಿ ವ್ಯಕ್ತಿ ನೆಲಕ್ಕೆ ಬಿದ್ದಿದ್ದಾನೆ. ಕೆಳಗ ಬಿದ್ದ ಕೂಡಲೆ ಮಿಲ್ರಾಯ್​ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಈ ವ್ಯಕ್ತಿ 2018ರಲ್ಲೆ ತನ್ನ ದೇಹದ ಅಂಗಾಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES