ಮೆಲ್ಬೋರ್ನ್: ಆಸ್ಟ್ರೇಲಿಯಾ-ಭಾರತ ನಡುವಣ 4ನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪುವೊಂದು ವಿವಾದಕ್ಕೀಡಾಗಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 71ನೇ ಓವರ್ನಲ್ಲಿ ಯಶಸ್ವಿ ಜೈಸ್ವಾಲ್ ಅವರಿಗೆ ನೀಡಿದ ತೀರ್ಪು ಇದೀಗ ಕ್ರಿಕೆಟ್ ಪ್ರೇಮಿಗಳನ್ನು ಸೇರಿದಂತೆ ಅನೇಕರ ಅಸಮಧಾನಕ್ಕೆ ಕಾರಣವಾಗಿದೆ.
ಪ್ಯಾಟ್ ಕಮಿನ್ಸ್ ಬೌಲಿಂಗ್ ಮಾಡಿದ 71ನೇ ಓವರ್ನಲ್ಲಿ ಯಶಸ್ವಿ ಹಿಂದೆ ತಿರುಗಿ ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಈ ವೇಳೆ ಚಂಡು ಬ್ಯಾಟ್ ಸಮೀಪದಲ್ಲಿ ಸಾಗಿ ವಿಕೆಟ್ ಕೀಪರ್ ಕೈಸೇರಿತು. ಇದರ ಬೆನ್ನಲ್ಲೆ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಸೇರಿದಂತೆ ಆಸ್ಟ್ರೇಲಿಯ ತಂಡದ ಆಟಗಾರರು ವಿಕೆಟ್ಗಾಗಿ ಮನವಿ ಮಾಡಿದರು. ಆದರೆ ಈ ವೇಳೆ ಫಿಲ್ಡ್ನಲ್ಲಿದ್ದ ಅಂಪೈರ್ ಈ ಮನವಿಯನ್ನು ತಿರಸ್ಕರಿಸಿದರು. ಈ ವೇಳೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಥರ್ಡ್ ಅಂಪೈರ್ ಮೊರೆ ಹೋದರು.
ಇದನ್ನೂ ಓದಿ : ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು : 2-1 ಅಂತರದ ಮುನ್ನಡೆ ಕಾಯ್ದುಕೊಂಡ ಆಸೀಸ್ !
ಮೂರನೇ ಅಂಪೈರ್ ಪರಿಶೀಲನೆ ವೇಳೆ ಚೆಂಡು ಬ್ಯಾಟ್ ಬಳಿಯಲ್ಲಿ ಸಾಗಿರುವಂತೆ ಕಂಡು ಬಂದರು ಕೂಡ ಸ್ನೀಕೋ ಮೀಟರ್ನಲ್ಲಿ ಯಾವುದೇ ಸ್ಪೈಕ್ ಕಾಣಿಸಿರಲಿಲ್ಲ. ಆದರೆ ಚಂಡಿನ ಚಲನೆಯನ್ನು ಸಾಕಷ್ಟು ಬಾರಿ ಪರಿಶೀಲನೆ ನಡೆಸಿದ ಥರ್ಡ್ ಅಂಪೈರ್ ಚೆಂಡಿನ ಚಲನೆ ಬದಲಿಸಿರುವುದನ್ನು ಪರಿಗಣಿಸಿ ಔಟ್ ಕೊಟ್ಟಿದ್ದಾರೆ. ಥರ್ಡ್ ಅಂಪೈರ್ ತೀರ್ಪಿನ ಬಗ್ಗೆ ಜೈಸ್ವಾಲ್ ಅಸಮಧಾನ ವ್ಯಕ್ತಪಡಿಸಿದ್ದು. ಫಿಲ್ಡ್ ಅಂಪೈರ್ ಮನವೊಲಿಸಿ ಜೈಸ್ವಾಲ್ರನ್ನು ಫಿಲ್ಡ್ನಿಂದ ಹೊರಗೆ ಕಳಿಸಿದರು.
ತೀರ್ಪಿನ ಬಗ್ಗೆ ಕ್ರಿಕೆಟ್ ಪ್ರಿಯರ ಆಕ್ರೋಶ !
ಜೈಸ್ವಾಲ್ ಬಗ್ಗೆ ನೀಡಿದ ತೀರ್ಪಿನ ವಿರುದ್ದವಾಗಿ ಕ್ರಿಕೆಟ್ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದು. ಜೈಸ್ವಾಲ್ ಅವರ ಬಾಲ್ಯದ ಕೋಚ್ ಖಾಸಗಿ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಬಿಸಿಸಿಐ ಉಪಧ್ಯಕ್ಷ ರಾಜೀವ್ ಶುಕ್ಲಾ ಅವರು ಕೂಡ ಟ್ವಿಟ್ ಮಾಡುವ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ.