Friday, January 10, 2025

ಸಿದ್ದರಾಮಯ್ಯರಿಂದ ಹೆಚ್ಚು ತೊಂದರೆಗೊಳಗಾದ ರಾಜಕಾರಣಿ ಎಂದರೆ ಅದು ನಾನು : ಪ್ರತಾಪ್​ ಸಿಂಹ

ಮೈಸೂರು: ಸಿದ್ದರಾಮಯ್ಯರ ಹೆಸರನ್ನು ರಸ್ತೆ ಇಡುವ ವಿಚಾರವಾಗಿ ಮಾತನಾಡಿ, ಸ್ವಪಕ್ಷದವರಿಂದಲೆ ಹೆಚ್ಚು ಟೀಕೆಗೆ ಒಳಗಾಗಿದ್ದ ಮಾಜಿ ಸಂಸದ ಪ್ರತಾಪ್​​ ಸಿಂಹ, ಇಂದು ಸುದ್ದಿಗೋಷ್ಟಿ ಮಾಡಿ ಹೇಳಿಕೆ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್​ ಸಿಂಹ ‘ ಸಿದ್ದರಾಮಯ್ಯರ ಹೆಸರನ್ನು ರಸ್ತೆಗೆ ಇಟ್ಟುಕೊಳ್ಳಿ ಎಂದ ಹೇಳಿಕೆ ಸಾಕಷ್ಟು ಟ್ವಿಸ್ಟ್​​ ಪಡೆದುಕೊಂಡಿದೆ. ನಾನು ಕಾಂಗ್ರೆಸ್​ ಸೇರುತ್ತೇನೆ, ಸಿದ್ದರಾಮಯ್ಯರ ಪರವಾಗಿ ಇದ್ದೇನೆ ಎಂಬ ಚರ್ಚೆಗಳು ಆರಂಭವಾಗಿದ್ದವು. ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ. ಕಳೆದ 11 ವರ್ಷದಿಂದ ಸಿದ್ದರಾಮಯ್ಯರನ್ನು ಸೈದ್ದಾಂತಿಕವಾಗಿ, ದರ್ಮದ ವಿಚಾರವಾಗಿ ನಾನು ವಿರೋದ ಮಾಡಿದ್ದೇನೆ. ಸಿದ್ದರಾಮಯ್ಯರ ಜಾತಿವಾದವನ್ನು ಖಡಾಖಂಡಿತವಾಗಿ ವಿರೋದ ಮಾಡಿದವನು ನಾನೋಬ್ಬನೆ. ಅವರ ಕೆಲ ಪ್ರಯತ್ನಗಳನ್ನು ನಾನು ವಿಫಲ ಮಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ : ಸೇನವಾಹನ ಪ್ರಪಾತಕ್ಕೆ ಉರುಳಿ ಅವಘಡ : ಕೊಡಗು ಮೂಲದ ಮತ್ತೊಬ್ಬ ಯೋಧ ಹುತಾತ್ಮ !

ಸಿದ್ದರಾಮಯ್ಯರ ಕೆಲ ಪ್ರಯತ್ನಗಳನ್ನು ನಾನು ವಿಫಲ ಮಾಡಿದ್ದೇನೆ !

ಸಿದ್ದರಾಮಯ್ಯರ ಕೆಲ ಪ್ರಯತ್ನಗಳನ್ನು ನಾನು ವಿಫಲ ಮಾಡಿದ್ದೇನೆ ಎಂದು ಮಾತನಾಡಿದ ಪ್ರತಾಪ್​ ಸಿಂಹ  ‘ ಸಿದ್ದರಾಮಯ್ಯ ಮೈಸೂರು ಏರ್​ಪೋರ್ಟ್ಗೆ ಟಿಪ್ಪು ಹೆಸರಿಡಲು ಮುಂದಾಗಿದ್ದರು. ಆದರೆ ನಾನು ಅದನ್ನು ವಿಫಲ ಮಾಡಿದೆ. ಇದಕ್ಕೆ ಮಹರಾಣಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಾಫರ್​ ಷರೀಫ್​ ರೈಲಿಗೆ ಟಿಪ್ಪು ಹೆಸರಿಟ್ಟಿದ್ದರು, ಅದಕ್ಕೆ ಯಾರೂ ಕೂಡ ವಿರೋಧ ಮಾಡಿರಲಿಲ್ಲ. ಅದನ್ನು ನಾನು ಸಂಸದನಾದ ಮೇಲೆ ಹೆಸರನ್ನು ಬದಲಾವಣೆ ಮಾಡಿದ್ದೇನೆ.

ಮಹಿಷ ದಸರ ವಿರೋಧ ಮಾಡಿದ್ದು ನಾನೋಬ್ಬನೆ, ಇದಕ್ಕೆ ನಮ್ಮ ಪಕ್ಷದ ನಾಯಕರು ಕೂಡ ನನ್ನ ಜೊತೆ ಬರಲಿಲ್ಲ. ಇವೆಲ್ಲ ನನ್ ಬದ್ದತೆ ಎಂದು ಹೇಳಿದರು.

ಕಾಂಗ್ರೆಸ್​ ಹೋಗುವ ಯಾವ ಅನಿವಾರ್ಯತೆಯು ನನಗೆ ಇಲ್ಲ !

ಸಿದ್ದರಾಮಯ್ಯ ಪರ ಮಾತನಾಡಿದ ಪ್ರತಾಪ್​ ಸಿಂಹ ಕಾಂಗ್ರೆಸ್​ ಸೇರ್ಪಡೆಯಾಗುತ್ತಾರೆ ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡಿದ ಪ್ರತಾಪ್​ ಸಿಂಹ ‘ ನಾನು ಕಾಂಗ್ರೆಸ್​ ಪಕ್ಷ ಸೇರ್ಪಡೆಯಾಗುವ ಯಾವುದೇ ಅನಿವಾರ್ಯತೆ ಇಲ್ಲ. ನಮ್ಮಪ್ಪ ಜನಸಂಘದಲ್ಲಿದ್ದರು, ನಾನು ಅದರ ಹೊಸ ಅವತಾರವಾದ ಬಿಜೆಪಿಯಲ್ಲಿದ್ದೇನೆ. ನಾನು ಸೈದ್ದಾಂತಿಕವಾಗಿ ಬದ್ದತೆಯಿಂದ ಬಿಜೆಪಿಯಲ್ಲಿದ್ದೇನೆ.

ಇದನ್ನೂ ಓದಿ : ಭೀಕರ ಸರಣಿ ಅಪಘಾತ : ಓರ್ವ ಸಾ*ವು , 4ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ !

ಕಾಂಗ್ರೆಸ್​ನಿಂದ ನನಗೆ ಯಾರು ಟಿಕೆಟ್​ ಆಫರ್​ ಮಾಡಿಲ್ಲ, ನಾನು ಕಾಂಗ್ರೆಸ್​ಗೆ ಹೋಗುವುದಾದರೆ ಚುನಾವಣೆ ಸಮಯದಲ್ಲೆ ಹೋಗುತ್ತಿದ್ದೆ. ಇವಾಗ ಹೋಗುವ ಯಾವ ದರ್ದು ನನಗೆ ಇಲ್ಲ.ಟಿಕೆಟ್​ ಕಳೆದು ಕೊಂಡವರು ಎಲ್ಲೆಲ್ಲಿದ್ದಾರೆ ಎಂದು ಓಮ್ಮೆ ನೋಡಿ. ಪ್ರತಾಪ್​ ಸಿಂಹ ಒಬ್ಬನೆ ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾನೆ.

ಸಿದ್ದರಾಮಯ್ಯರಿಂದ ಅತಿ ಹೆಚ್ಚು ತೊಂದರೆಗೊಳಗಾದ ಮೈಸೂರು ಭಾಗದ ರಾಜಕಾರಣಿ ಎಂದರೆ ಅದು ನಾನು, ವರುಣಾ ಚುನಾವಣೆ ವೇಳೆ ಹೋರಾಟ ಮಾಡುದ್ದಕ್ಕೆ ನನ್ನ ಮೇಲೆ ಎರಡೆರಡು ಕೇಸ್​ ದಾಖಲು ಮಾಡಿದ್ದಾರೆ. ಅವರಿಂದ ನನಗೆ ತುಂಬಾ ತೊಂದರೆಯಾಗುತ್ತಿದೆ. ಸಿದ್ದರಾಮಯ್ಯ ಹಿಂದೂ ವಿರೋದಿ, ಜಾತಿ ವಾದಿ ಎಂದು ಸಿದ್ದರಾಮಯ್ಯರ ವಿರುದ್ದ ಗುಡುಗಿದರು.

RELATED ARTICLES

Related Articles

TRENDING ARTICLES