Tuesday, December 31, 2024

ಹೊಸವರ್ಷಾಚರಣೆಗೆ ಕ್ಷಣಗಣನೆ ಆರಂಭ : ಡ್ರಗ್ಸ್​ ಪೆಡ್ಲರ್​ಗಳ​ ಪರೇಡ್​ ನಡೆಸಿ ವಾರ್ನಿಂಗ್ ಕೊಟ್ಟ ಕಮಿಷನರ್​

ಧಾರವಾಡ : ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷದ ಆಚರಣೆಗೆ ಕೆಲವೇ ದಿನಗಳು ಬಾಕಿ ಇರುವ ನಿಟ್ಟಿನಲ್ಲಿ ಯಾವುದೇ ರೀತಿಯ ಅಹಿತಕರ ಚಟುವಟಿಕೆ ನಡೆಯದಂತೆ ಖಾಕಿ ಕಟ್ಟೆಚ್ಚರ ವಹಿಸಿದ್ದು,ಮುನ್ನೆಚ್ಚರಿಕೆ ಕ್ರಮವಾಗಿ ಡ್ರಗ್ ಪೆಡ್ಲರ್ ಗಳ ಪರೇಡ್ ನಡೆಸಿದ ಕಮಿಷನರ್ ಪೆಡ್ಲರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಹೊಸ ವರ್ಷದ ಆಚರಣೆ ವೇಳೆ ಅನೇಕರು ಗಾಂಜಾ, ಡ್ರಗ್ಸ್, ನಂತಹ ವಿವಿಧ ಮಾದಕ ವಸ್ತುಗಳನ್ನು ಸೇವನೆ ಮಾಡಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಹೀಗಾಗಿ ಈ ನಿಟ್ಟಿನಲ್ಲಿ ಅವಳಿ ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸುಮಾರು 200 ಕ್ಕೂ ಹೆಚ್ಚು ಡ್ರಗ್ಸ್ ಕುಳಗಳನ್ನು ಹಳೇ ಸಿ ಆರ್ ಮೈದಾನದಲ್ಲಿ ಪರೇಡ್ ನಡೆಸಲಾಯಿತು.

ಇದನ್ನೂ ಓದಿ :2024ರಲ್ಲಿ ಜನರಿಗೆ ಹೆಚ್ಚು ಇಷ್ಟವಾದ ಟಾಪ್​ 5 ಹಾಡುಗಳು ಯಾವುವು ಗೊತ್ತೇ ! 

ಈಗಾಗಲೇ ಅವಳಿ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ NDPS ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುವ ಆರೋಪಿಗಳ ಮೇಲೆ ನಿಗಾವಹಿಸಲಾಗಿದ್ದು, ಮತ್ತೇ ಮಾದಕ ವಸ್ತುಗಳ ಮಾರಾಟ ಚಟುವಟಿಕೆಯಲ್ಲಿ ಭಾಗಿಯಾದ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಅಂತಾ ಸೂಚನೆ ನೀಡಿದರು.

ಸದ್ಯ ಅವಳಿ ನಗರದಲ್ಲಿ ಈಗಾಗಲೇ ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಯುವ ಸಮೂಹದಲ್ಲಿ ಜಾಗ್ರತಿ ಜೊತೆಗೆ ಡ್ರಗ್ಸ್ ದಂದೇಕೋರರಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡುತ್ತಿರೋ ಅವಳಿ ನಗರದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES