ಬೆಂಗಳೂರು : ಬೀದರ್ನಲ್ಲಿ ಕಂಟ್ರ್ಯಾಕ್ಟರ್ ಸಚಿನ್ ಆತ್ಮಹತ್ಯೆಯ ಕುರಿತು ಮಾಧ್ಯಮ ಸುದ್ದುಗೋಷ್ಟಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ‘ಯುವಕನ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಆದರೆ ಇದರ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು. ಇದನ್ನು ಸಿಐಡಿಗೆ ವಹಿಸಲು ಗೃಹ ಸಚಿವರ ಜೊತೆಗೆ ಮಾತನಾಡುತ್ತೇನೆ ಎಂದು ಹೇಳಿದರು.
ಬಿಜೆಪಿ ಅವದಿಯಲ್ಲಿ ನಡೆದಿದ್ದ ಅಕ್ರಮಗಳ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಈಶ್ವರಪ್ಪನ ಪ್ರಕರಣವನ್ನು ನೆನಪಿಸಿಕೊಂಡರು ‘ಈಶ್ವರಪ್ಪನ ಹೆಸರನ್ನು ಆತ್ಮಹತ್ಯೆ ಮಾಡಿಕೊಂಡ ಯುವಕ ತನ್ನ ಡೆತ್ ನೋಟ್ನಲ್ಲಿ ಬರೆದಿದ್ದ. ಇದರಲ್ಲಿ ಈಶ್ವರಪ್ಪ ನೇರ ಆರೋಪಿಯಾಗಿದ್ದರು. ಅದಕ್ಕೆ ಅವರಿಗೆ ಬಿಜೆಪಿಯವರು ಟಿಕೆಟ್ ಕೊಡಲಿಲ್ಲ. ಆದರೆ ಈ ಪ್ರಕರಣದಲ್ಲಿ ಯುವಕ ಸಚಿನ್ ಖಾಸಗಿ ಕಂಪನಿ ಮೇಲೂ ದೂರು ನೀಡಿದ್ದಾನೆ. ಆ ಕೇಸ್ನಲ್ಲಿ 8ಜನ ಆರೋಪಿಗಳಿದ್ದಾರೆ. 65 ಲಕ್ಷ ಹಣವನ್ನು ಬ್ಯಾಂಕ್ ಮೂಲಕ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಇದರ ಬಗ್ಗೆ ನಾನು ಎಲ್ಲೂ ಮೌಖಿಕ ಆದೇಶವನ್ನು ನೀಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಪ್ರೀತಿಯ ಶ್ವಾನದ ನಿಧನಕ್ಕೆ ಕಣ್ಣೀರನ ಪತ್ರ ಬರೆದು ವಿದಾಯ ಹೇಳಿದ ಗೀತಾ ಶಿವರಾಜ್ಕುಮಾರ್ !
ಈ ಪ್ರಕರಣವನ್ನು ರೈಲ್ವೇ ಪೊಲೀಸರ ಕೈಲಿ ಸರಿಯಾಗಿ ತನಿಖೆ ನಡೆಸಲು ಸಾಧ್ಯವಾಗಲ್ಲ. ಈ ಪ್ರಕರಣವನ್ನು ಸಿಐಡಿಗೆ ಕೊಡಿ ಎಂದು ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಯಾರೇ ಆಗಲಿ, ಪಾರದರ್ಶಕವಾಗಿ ತನಿಖೆ ಆಗಬೇಕು. ಆದರೆ ಆರೋಪಿಗಳು ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಪೊಲೀಸರು ವಿಚಾರಣೆ ಕರೆದರೆ ಅವರು ಹೋಗಿ ವಿಚಾರಣೆ ಎದುರಿಸುತ್ತಾರೆ ಎಂದು ಹೇಳಿದರು.
ಡೆತ್ ನೋಟ್ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ ‘ ಡೆತ್ನೋಟ್ ಫೇಕ ಇದೆಯ ಎಂಬುದು ನನಗೆ ಗೊತ್ತಿಲ್ಲ. ಮೃತ ವ್ಯಕ್ತಿಯೆ ಬರೆದಿದ್ದಾರೆ ಎಂಬುದು ನನಗೆ ಹೇಗೆ ತಿಳಿಯುತ್ತೆ. ಆದರೆ ಅದರ ಎಫ್.ಎಸ್.ಎಲ್ ರಿಪೋಟ್ ಬರಲಿ. ಪ್ರೋಸಿಜರ್ ಪ್ರಕಾರ ತನಿಖೆ ಆಗಲಿ. ನಾನೂ ಇದರ ಬಗ್ಗೆ ಯಾರ ಬಳಿಯು ಮಾತನಾಡಿಲ್ಲ ಎಂದು ಹೇಳಿದರು.