Sunday, December 29, 2024

ಅಮೋಘ ಶತಕ ಸಿಡಿಸಿದ ನಿತಿಶ್​ ರೆಡ್ಡಿ : ಸ್ಟೇಡಿಯಂನಲ್ಲಿ ಕಣ್ಣೀರು ಸುರಿಸಿ ದೇವರಿಗೆ ಕೃತಜ್ಙತೆ ಅರ್ಪಿಸಿದ ತಂದೆ !

ಮೆಲ್ಬರ್ನ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್​ ನಿತೀಶ್ ಕುಮಾರ್ ರೆಡ್ಡಿ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಆದರೆ ನಿತಿಷ್​ ಶತಕ ಸಿಡಿಸುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅವರ ತಂದೆ ಮಗನ ಸಾಧನೆಯನ್ನು ನೋಡಿ ಕಣ್ಣೀರು ಸುರಿಸಿ ದೇವರಿಗೆ ಕೃತಜ್ಙತೆ ಅರ್ಪಿಸಿದರು.

ಭಾರತ ಮತ್ತು ಆಸ್ಟ್ರೇಲಿಯ ನಡುವಿನ ನಾಲ್ಕನೇ ಪಂದ್ಯಕ್ಕೆ ಮೆಲ್ಬೋರ್ನ್ ಮೈದಾನ ಆಥಿತ್ಯ ವಹಿಸಿದ್ದು. 21 ವರ್ಷದ ಯುವ ಬ್ಯಾಟರ್ ನಿತಿಶ್​ ಕುಮಾರ್​ ರೆಡ್ಡಿ ಮೊಟ್ಟ ಮೊದಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಆರಂಭಿಕ ಆಘಾತ ಅನುಭವಿಸಿ ಫಾಲೋ ಆನ್ ಭೀತಿಯಲ್ಲಿದ್ದ ಭಾರತಕ್ಕೆ ಅಮೋಘ ಬ್ಯಾಟಿಂಗ್​ ಪ್ರದರ್ಶನ ನೀಡಿದ ನಿತಿಶ್​ ಅಜೇಯ 105 ರನ್​ ಗಳಿಸಿ ನಾಲ್ಕನೆ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ.

ಇದನ್ನೂ ಓದಿ : ಮುನಿರತ್ನ ಪ್ರಧಾನಿಗೆ ಪತ್ರ ಬರೆದು, ಎಸ್​.ಪಿ.ಜಿ ಭದ್ರತೆ ಪಡೆದುಕೊಳ್ಳಲಿ : ಡಿ,ಕೆ ಸುರೇಶ್​​

ನಿತೀಶ್ ಕುಮಾರ್ ರೆಡ್ಡಿ ಶತಕ ಸಿಡಿಸುವ ವೇಳೆ ಅವರ ತಂದೆ ಮುತ್ಯಾಲ ರೆಡ್ಡಿ ಕೂಡಾ ಎಂಸಿಜಿ ಮೈದಾನದಲ್ಲಿ ಹಾಜರಿದ್ದರು. ನಿತೀಶ್ ಕುಮಾರ್ ರೆಡ್ಡಿ ಶತಕ ಬಾರಿಸುತ್ತಿದ್ದಂತೆಯೇ ಅವರ ತಂದೆಯ ಆನಂದಭಾಷ್ಪ ಕಟ್ಟೆಯೊಡೆಯಿತು. ತಾವಿದ್ದಲ್ಲಿಂದಲೇ ದೇವರಿಗೆ ಕೈಮುಗಿದು ಧನ್ಯವಾದಗಳನ್ನು ಅರ್ಪಿಸಿದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ನಿತಿಶ್​ರೆಡ್ಡಿಯನ್ನು ಕ್ರಿಕೆಟರ್​ ಮಾಡಲು ಅವರ ತಂದೆ ತಮ್ಮ ಕೆಲಸವನ್ನೆ ತ್ಯಾಗ ಮಾಡಿದ್ದರು. ಆದರೆ ಇಂದು ಅವರ ಶ್ರಮಕ್ಕೆ ಪ್ರತಿಫಲ ದೊರೆತಿದಂತಾಗಿದೆ.

RELATED ARTICLES

Related Articles

TRENDING ARTICLES