ಬೆಂಗಳೂರು : ಮಾಜಿ ಸಂಸದ ಡಿ,ಕೆ ಸುರೇಶ್ ಮುನಿರತ್ನನ ಮೇಲೆ ವಾಗ್ದಾಳಿ ನಡೆಸಿದ್ದು. ಮುನಿರತ್ನನ ಮೇಲೆ ಆದ ಮೊಟ್ಟೆ ದಾಳಿಯನ್ನು ವ್ಯಂಗ್ಯವಾಗಿ ವಿಡಂಬಿಸಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಡಿ,ಕೆ ಸುರೇಶ್ ‘ ಮೊಟ್ಟೆ ದಾಳಿಯಾದಗ ನಾನು ಬೆಳಗಾವಿಯ ಗಾಂಧಿಭಾರತ್ ಕಾರ್ಯಕ್ರಮದಲ್ಲಿದ್ದೆ. ಬೆಂಗಳೂರಿಗೆ ಬಂದ ನಂತರ ಮಾತನಾಡುತ್ತೇನೆ ಎಂದು ಹೇಳಿದ್ದೆ. ಈಗ ಬೆಂಗಳೂರಿಗೆ ಬರುವಾಗ ಗಾಡಿಯಲ್ಲಿ ಮುನಿರತ್ನನಿಗೆ ಮೊಟ್ಟೆ ಹೊಡೆದ ವಿಡಿಯೋವನ್ನು ನೋಡಿಕೊಂಡು ಬಂದೆ. ಮುನಿರತ್ನ ನಮ್ಮ ಮೇಲೆ ಆರೋಪ ಮಾಡಿದ್ದಾನೆ.
ಇದನ್ನೂ ಓದಿ : ಆನ್ಲೈನ್ ಆ್ಯಪ್ನಲ್ಲಿ ಹಣ ಹೂಡಿಕೆ ಮಾಡಿದ್ದ ಯುವಕ ಆತ್ಮಹತ್ಯೆಗೆ ಶರಣು !
ವಿಡಿಯೋದಲ್ಲಿ ಆ್ಯಸಿಡ್ ದಾಳಿ ಎಂದು ಹೇಳಿದ ಮೂರು ಸೆಕೆಂಡ್ ನಂತರ ಮೊಟ್ಟೆ ದಾಳಿಯಾಗಿದೆ. ಅದನ್ನು ನೋಡಿ ನನಗೂ ಆಘಾತ ಆಯ್ತು. ಮುನಿರತ್ನ ಕನ್ನಡ ಚಿತ್ರರಂಗದ ಅಧ್ಯಕ್ಷರಾಗಿದ್ದರು. ಅವಾಗವಾಗ ಫಿಲ್ಮ್ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇವಾಗ ನಟನೆ ಮಾಡುತ್ತಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು.
ಮುನಿರತ್ನನಿಗೆ ಮೊಟ್ಟೆ ಹೊಡೆದ ಪ್ರಕರಣವನ್ನು ಸಿ,ಬಿ.ಐಗೆ ಕೊಟ್ಟು ತನಿಖೆ ಮಾಡಿಸಿ. ಅದರ ಜೊತೆಗೆ ಪೇಮಸ್ ಡಾಕ್ಟರ್ ಬಂದು ಕೂದಲು ಸುಟ್ಟಿದೆ ಎಂದು ಹೇಳಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಪ್ರಧಾನಿಗೆ ಪತ್ರ ಬರೆದು ಎಸ್.ಪಿ.ಜಿ ಭದ್ರತೆ ತೆಗೆದುಕೊಳ್ಳಲು ಹೇಳಿ.
ಬಿಜೆಪಿಯವರೆಲ್ಲ ನನ್ನ ಸೋಲಿಸಿದ್ದಾರೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ನನ್ನನ್ನು ಸೋಲಿಸಿದ್ದು ಜನ. ಅದನ್ನು ನಾನು ಒಪ್ಪಿಕೊಂಡಿದ್ದೇನೆ. ಬಿಜೆಪಿಯವರ ಯೋಗ್ಯತೆಗೆ ನನ್ನನ್ನು ಸೋಲಿಸಲು ಆಗಲ್ಲ. ಬಿಜೆಪಿ, ಜೆಡಿಎಸ್ನವರ ಸಿನಿಮಾ ಓಡಬೇಕಾದರೆ ನನ್ನ ಮತ್ತು ನಮ್ಮ ಅಣ್ಣನ ಹೆಸರು ಹೇಳಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮೇಲೆ ವಾಗ್ದಾಳಿ ನಡೆಸಿದರು.