Monday, December 30, 2024

ಆನ್​​ಲೈನ್​​ ಆ್ಯಪ್​ನಲ್ಲಿ ಹಣ ಹೂಡಿಕೆ ಮಾಡಿದ್ದ ಯುವಕ ಆತ್ಮಹತ್ಯೆಗೆ ಶರಣು !

ಮಂಗಳೂರು : ಇತ್ತೀಚೆಗೆ ಸೈಬರ್​ ಕ್ರೈಂಗಳ ಸಂಖ್ಯೆ ದಿನೇ,ದಿನೇ ಹೆಚ್ಚಾಗುತ್ತಿದ್ದು. ಮಂಗಳೂರಿನಲ್ಲಿ ಯುವಕನೊಬ್ಬ ಆನ್​ಲೈನ್​ ಆ್ಯಪ್​ನಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಂಗಳೂರಿನ ಮೂಡುಶೆಡ್ಡೆ ನಿವಾಸಿ ಸೂರ್ಯ (23) ಆತ್ಮಹತ್ಯೆಗೆ ಶರಣಾಗಿದ್ದು. ಸೂರ್ಯ ಕಳೆದ ಕೆಲವು ದಿನಗಳಿಂದ ಆನ್​ಲೈನ್​ ಆ್ಯಪ್​ ಮೂಲಕ ಹಣ ಹೂಡಿಕೆ ಮಾಡಿದ್ದನು. ಆನ್​ಲೈನ್​ನಲ್ಲಿ ನೀಡುವ ಟಾಸ್ಕ್​ ಕ್ಲಿಯರ್​ ಮಾಡಿದರೆ ಭರ್ಜರಿ ಹಣ ನೀಡುವ ಆಮೀಷ ಒಡ್ಡಿದ್ದರು. ಇದನ್ನು ನಂಬಿದ್ದ ಸೂರ್ಯ ಹಣವನ್ನು ಹೂಡಿಕೆ ಮಾಡಿದ್ದನು. ಆದರೆ ಹಣ ವಿತ್​ಡ್ರಾ ಮಾಡಲು ಇನ್ನಷ್ಟು ಹಣವನ್ನು ಕೇಳಿದ್ದರು.

ಇದನ್ನೂ ಓದಿ : ದರ್ಶನ್​ ಜೊತೆಗೆ ಮತ್ತೆ ಸಿನಿಮಾ ಮಾಡೇ ಮಾಡುತ್ತೇನೆ : ದಿನಕರ್ ತೂಗುದೀಪ್​ 

ಇದನ್ನು ನಂಬಿದ್ದ ಸೂರ್ಯ ಹಣದ ಆಸೆಗೆ ಸ್ನೇಹಿತರ ಬಳಿಯಲ್ಲಿ ಸುಮಾರು 85 ಸಾವಿರ ಹಣವನ್ನು ಪಡೆದು ಹೂಡಿಕೆ ಮಾಡಿದ್ದ. ಆದರೆ ಆ್ಯಪ್​ ಮೂಲಕ ಹಣ ಸಿಗದ ಕಾರಣ ಕಳೆದ ಡಿಸೆಂಬರ್. 24ರಂದು ನಾಪತ್ತೆಯಾಗಿದ್ದನು.

ಹೀಗೆ ನಾಪತ್ತೆಯಾದ ಸೂರ್ಯ ಡಿ.26ರಂದು ಮೂಡುಶೆಡ್ಡೆ ಕಿಂಡಿ ಅಣೆಕಟ್ಟಿನ ಬಳಿಯಲ್ಲಿ ಶವವಾಗಿ ಪತ್ತೆಯಾಗಿದ್ದು. ಘಟನೆ ಸಂಬಂಧ ಕಾವೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES