ಚಿತ್ರದುರ್ಗ : ಮಲದ ಗುಂಡಿಯನ್ನು ಸ್ವಚ್ಚಗೊಳಿಸುತ್ತಿದ್ದ ಕಾರ್ಮಿಕನೋರ್ವ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆದಿದೆ. ಘಟನೆ ಸಂಬಂಧ ಸಫಾಯಿ ಕರ್ಮಚಾರಿಗಳ ಸೇವಾ ಸಮಿತಿಯಿಂದ ಡಿ,ಸಿ ಕಛೇರಿಗೆ ದೂರು ಸಲ್ಲಿಸಿದ್ದಾರೆ.
ಚಳ್ಳಕೆರೆಯ ಗಾಂಧಿನಗರ ಬಡಾವಣೆಯ 48 ವರ್ಷದ ರಂಗಸ್ವಾಮಿ ಎಂಬ ಕಾರ್ಮಿಕ ಡಿಸೆಂಬರ್ 18ರಂದು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮಲದ ಗುಂಡಿಗೆ ಇಳಿದು ಸ್ವಚ್ಚತೆ ನಡೆಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ ಎಂದು ದೂರು ದಾಖಲು ಮಾಡಲಾಗಿದೆ.
ಇದನ್ನೂ ಓದು : ದೇವರ ಆಶೀರ್ವಾದ & ಎಲ್ಲರ ಹಾರೈಕೆಯಿಂದ ಶಿವಣ್ಣನಿಗೆ ಮಾಡಿದ ಸರ್ಜರಿ ಯಶಸ್ವಿ : ಅಮೇರಿಕಾದ ವೈದ್ಯರು!
ಘಟನೆ ಸಂಬಂಧ ನಗರಸಭೆ ಕಂದಾಯ ನಿರೀಕ್ಷಕ ಗುರುಪ್ರಸಾದ್ ಎಂಬುವವರು ಕಲ್ಯಾಣ ಮಂಟಪದ ಮಾಲೀಕ ಗುರವೀರ್ ನಾಯಕ್ ವಿರುದ್ದ ಡಿ,ಸಿ ಕಛೇರಿಗೆ ದೂರು ಸಲ್ಲಿಸಿದ್ದಾರೆ. ಇದರ ಜೊತೆಗೆ ಸಫಾಯಿ ಕರ್ಮಚಾರಿಗಳ ಸೇವಾ ಸಮಿತಿಯಿಂದಲೂ ಡಿ,ಸಿ ಕಛೇರಿಗೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಡಿ.ಸಿ ಕಛೇರಿಯಿಂದ ಸೂಚನೆ ನೀಡಿದ ಹಿನ್ನಲೆ ನಗರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಈ ದೂರು ದಾಖಲಾಗುವ ಮುನ್ನ ಮೃತ ಕಾರ್ಮಿಕ ನೀರಿದ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಾಗಿತ್ತು.