ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಖಳನಾಯಕನ ಪಾತ್ರಕ್ಕಾಗಿ ಮೊದಲ ಬಾರಿಗೆ ಬರೊಬ್ಬರಿ 200 ಕೋಟಿ ರೂ.ಸಂಭಾವನೆ ಪಡೆಯುವ ಮೂಲಕ ಕನ್ನಡದ ಸ್ಟಾರ್ ಇದೀಗ ಭಾರತಿಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಚಿತ್ರರಂಗದಲ್ಲಿ ಸಾಮಾನ್ಯವಾಗಿ ಬಿ-ಟೌನ್ ಮುಂದಿಯೇ ಅತಿಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದರು, ಬಳಿಕ ಸೌತ್ ಸ್ಟಾರ್ಗಳಾದ ರಜನಿಕಾಂತ್, ಕಮಲ್ ಹಾಸನ್ ಮತ್ತು ಪ್ರಭಾಸ್ ಸೇರಿದಂತೆ ಹಲವು ನಟರು ದುಪಟ್ಟು ಸಂಭಾವನೆ ಪಡೆಯುತ್ತಿರುವುದು ವರದಿಯಾಗಿದೆ. ಇದೀಗ ಬಾಲಿವುಡ್ನ ಶಾರುಖ್ ಖಾನ್, ಸಲ್ಮಾನ್ ಖಾನ್, ರಣಬೀರ್, ಕಪೂರ್ ಸೇರಿದಂತೆ ದಕ್ಷಿಣ ನಟರ ಸಂಭಾವನೆಯನ್ನು ಮೀರಿಸಿ ನಮ್ಮ ಕನ್ನಡ ನಟ ಇತಿಹಾಸ ಬರೆದಿದ್ದಾರೆ.
ಹೌದು, ಅವರು ಬೇರೆ ಯಾರು ಅಲ್ಲ, ನಮ್ಮ ಚಿತ್ರರಂಗದ ಖ್ಯಾತಿಯನ್ನು ವಿಶ್ವಾದ್ಯಂತ ಪಸರಿಸಿದ ಕೆಜಿಎಫ್ ಖ್ಯಾತಿ ರಾಕಿಂಗ್ಸ್ಟಾರ್ ಯಶ್. ಬಾಲಿವುಡ್ನ ನಿತೇಶ್ ತಿವಾರಿ ನಿರ್ದೇಶನ ಮೂಡಿ ಬರುತ್ತಿರುವ ರಾಮಾಯಣದಲ್ಲಿ ಚಿತ್ರದಲ್ಲಿ ಯಶ್ ಖಳನಾಯಕ (ರಾವಣ) ಪಾತ್ರ ನಿರ್ವಹಿಸುತ್ತಿದ್ದು, ಈ ಪಾತ್ರಕ್ಕೆ ಬರೊಬ್ಬರಿ 200 ಕೋಟಿ ರೂ. ಸಂಭಾವನೆ(ವಿತರಣೆಯ ಪಾಲು ಮತ್ತು ಸಿನಿಮಾದ ಶುಲ್ಕ) ಇದೆ ಎಂದು ವರದಿಯಾಗಿದೆ. ಅಲ್ಲದೇ, ಈ ಚಿತ್ರದಲ್ಲಿನ ರಾಮನ ಪಾತ್ರಧಾರಿ ರಣಬೀರ್ ಕಫೂರ್ಗಿಂತ ದುಪಟ್ಟು ಎಂದು ಹೇಳಲಾಗುತ್ತಿದೆ.
ಪ್ರಭಾಸ್ ನಟನೆಯ ಕಲ್ಕಿ2898AD ಚಿತ್ರದಲ್ಲಿ ಕಮಲ್ ಹಾಸನ್ ಅತಿಥಿ ಪಾತ್ರಕ್ಕೆ 25ರಿಂದ 40 ಕೋಟಿ ರೂ.ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಬರೊಬ್ಬರಿ 200 ಕೋಟಿ ರೂ.ಗಡಿದಾಟಿದ ಯಶ್!
ಭಾರತೀಯ ಚಿತ್ರರಂಗದಲ್ಲಿ ಒಂದೇ ಚಿತ್ರಕ್ಕೆ ಮೂವರೂ ನಟರಾದ ಅಲ್ಲು ಅರ್ಜುನ್, ರಜನಿಕಾಂತ್ ಮತ್ತು ವಿಜಯ್ 200 ಕೋಟಿ ರೂ.ಪಡೆದಿದ್ದಾರೆ. ಆದರೆ, ಖಳನಾಯಕ ಪಾತ್ರಕ್ಕೆ ಇದೇ ಮೊದಲ ಬಾರಿಗೆ 200 ಕೋಟಿ ರೂ. ಮೊತ್ತ ಯಶ್ ಪಡೆಯುತಿದ್ದಾರೆ. ಇನ್ನು ಬಿ-ಟೌನ್ ವಿಷಯಕ್ಕೆ ಬರುವುದಾದರೆ ಜವಾನ್ ಚಿತ್ರದ ಬಳಿಕ ಶಾರುಖ್ ಖಾನ್ ಪ್ರತಿಚಿತ್ರಕ್ಕೆ 150 ಕೋಟಿ ರೂ.ಪಡೆಯುತ್ತಿದ್ದಾರೆ. ಸಲ್ಮಾಖ್ ಖಾನ್ ಕೂಡ ಇದೇ ಮೊತ್ತವನ್ನು ಪಡೆಯುತ್ತಿದ್ದಾರೆ. 2017ರಿಂದ ಅಮೀರ್ ಖಾನ್ ಕೂಡ 200 ಕೋಟಿ ರೂ.ಗಡಿ ದಾಟುತ್ತಿಲ್ಲ. ಇತ್ತ ಸೌತ್ ಸ್ಟಾರ್ ಪ್ರಭಾಸ್ ಕೂಡ 120-150 ಕೋಟಿ ರೂ. ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.