ಕಲಬುರಗಿ : ಆ ಮಹಿಳೆ ತನ್ನ ಬುದ್ಧಿಮಾಂದ್ಯ ಮಗನನ್ನ ಶಾಲೆಗೆ ಬಿಡಲು ಶಾಲಾ ವಾಹನದ ಬಳಿ ಬಂದಿದ್ದಾಳೆ.. ಶಾಲಾ ವಾಹನದಲ್ಲಿ ಮಗನನ್ನ ಬಿಡ್ತಿರೋವಾಗ ಬಸ್‌ನಿಂದ ಮಹಿಳೆಗೆ ಏಕಾಏಕಿ ವಿದ್ಯುತ್ ಶಾಕ್ ತಗುಲಿದೆ… ಇಷ್ಟೇ ನೋಡಿ.. ಏಕಾಏಕಿ ಮಹಿಳೆಯ ಹೊಟ್ಟೆ, ಕಾಲು ಕೈ ಸುಟ್ಟು ತೀವ್ರ ಗಾಯವಾಗಿದ್ದು ಅದೃಷ್ಟವಶಾತ್ ಶಾಲಾ ವಾಹನದಲ್ಲಿದ್ದ 12 ಕ್ಕೂ ಅಧಿಕ ಬುದ್ಧಿಮಾಂದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ..
ಕಲಬುರಗಿ ನಗರದ ಮೋಹನ್ ಲಾಡ್ಜ್ ಬಳಿ ಎಂದಿನಂತೆ ಬುದ್ಧಿಮಾಂದ್ಯ ಮಕ್ಕಳನ್ನ ಶಾಲೆಗೆ ಕರೆದುಕೊಂಡು ಹೋಗಲು ಪರಿವರ್ತಕ ಶಾಲಾ ವಾಹನ ಬಂದಿದೆ. ಅದರಂತೆ ಭಾಗ್ಯಶ್ರೀ ಎಂಬ ಮಹಿಳೆ ತನ್ನ ಮಗನ್ನನ್ನ ಬಿಡಲು ಶಾಲಾ ವಾಹನದ ಬಳಿ ಬಂದಿದ್ದಾಳೆ. ಈ ವೇಳೆ ಶಾಲಾ ವಾಹನಕ್ಕೆ ಸ್ಟ್ರೀಟ್ ಲೈಟ್ ಕಂಬದ ವಿದ್ಯುತ್ ತಂತಿ ತಾಗಿದೆ.. ಅಷ್ಟರಲ್ಲಿಯೇ ಭಾಗ್ಯಶ್ರೀ ಎಂಬ ಮಹಿಳೆ ತನ್ನ ಮಗನಿಗೆ ವಾಹನದಲ್ಲಿ ಬಿಡ್ತಿರೋವಾಗ ವಿದ್ಯುತ್ ಶಾಕ್ ತಗುಲಿದೆ.. ಈ ವೇಳೆ ಭಾಗ್ಯಶ್ರಿಗೆ ವಿದ್ಯುತ್ ಶಾಕ್ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಕೆಳೆಗೆ ಬಿದ್ದ ಭಾಗ್ಯಶ್ರೀ ತೀವ್ರ ಸುಟ್ಟ ಗಾಯಗಳೊಂದಿಗೆ ನರಳಾಡಿದ್ದಾಳೆ.
ಇದನ್ನೂ ಓದಿ : ಮಗುವನ್ನು ಶಾಲಾ ಬಸ್‌ಗೆ ಹತ್ತಿಸಲು ಹೋಗಿದ್ದ ತಾಯಿಗೆ ಕರೆಂಟ್ ಶಾಕ್: ನಡುರಸ್ತೆಯಲ್ಲಿ ಒದ್ದಾಡಿದ ಮಹಿಳೆ
ಇನ್ನೂ ರಸ್ತೆ ಪಕ್ಕದ ಡಿವೈಡರ್ ಮೇಲಿನ ಸ್ಟ್ರೀಟ್ ಲೈಟ್ ಕಂಬದ ವಿದ್ಯುತ್ ವೈರ್‌ಗಳು ಬೆಕ್ಕಾಬಿಟ್ಟಿಯಾಗಿ ಬಿಟ್ಟ ಪರಿಣಾಮ ಶಾಲಾ ವಾಹನಕ್ಕೆ ವಿದ್ಯುತ್ ತಂತಿ ತಗುಲಿದೆ. ಈ ವೇಳೆ ಮಹಿಳೆ ಭಾಗ್ಯಶ್ರೀ ಬಸ್‌ನಲ್ಲಿ ಮಗನನ್ನ ಹತ್ತಿಸಿ ಬಸ್‌ಗೆ ಕೈ ತಾಕಿಸಿ ನಿಂತಿದ್ದಾಳೆ. ತಕ್ಷಣದ ಬಸ್‌ನಿಂದ ಮಹಿಳೆಗೆ ಕರೆಂಟ್ ಶಾಕ್ ಹೊಡೆದಿದ್ದು, ಅರ್ಥಿಂಗ್ ಮೂಲಕ ಮಹಿಳೆಗೆ ಶಾಕ್ ತಗುಲಿದೆ, ಶಾಲಾ ವಾಹನಕ್ಕೆ ಟಯರ್‌ಗಳ ಕಾರಣ ಮಕ್ಕಳಿಗೆ ಕರೆಂಟ್ ಶಾಕ್ ಅನುಭವವಾಗಿಲ್ಲ.
ತಕ್ಷಣ ಸಾರ್ವಜನಿಕರು ಶಾಲಾ ವಾಹನದಲ್ಲಿದ್ದ 12 ಬುದ್ಧಿಮಾಂದ್ಯ ಮಕ್ಕಳನ್ನ ಸುರಕ್ಷಿತವಾಗಿ ಸ್ಥಳಾಂತರ ಮಾಡಿದ್ದಾರೆ. ಇನ್ನೂ ಘಟನೆಯಲ್ಲಿ ಮಹಿಳೆ ಭಾಗ್ಯಶ್ರೀಯ ಹೊಟ್ಟೆ, ಕಾಲು, ಕೈಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ತಕ್ಷಣವೇ ಆಕೆಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕಳೆದ ವಾರವಷ್ಟೆ ಕಲಬುರಗಿಯಲ್ಲಿ ಪಾಲಿಕೆಯ ಎಲೆಕ್ಟ್ರಿಕ್ ವಿದ್ಯುತ್ ಕಂಬದ ವೈರ್ ತಗುಲಿ ಬಾಲಕನೊಬ್ಬ ಸಾವನ್ನಪ್ಪಿದ್ದನು. ಘಟನೆ ಬಳಿಕ ಪಾಲಿಕೆ ಎಚ್ಚೆತ್ತುಕೊಳ್ಳದೇ ಇರೋದ್ರಿಂದ ಇಂದು ಮತ್ತೊಂದು ಘೋರ ದುರಂತ ನಡೆದಿದೆ..