Tuesday, December 24, 2024

ವಷಾಂತ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾನೆ ಜವರಾಯ : ವಾಹನ ಸವಾರರೆ ಎಚ್ಚರ !

ಹಾಸನ, ಶಿವಮೊಗ್ಗ ಸೇರಿ 3 ಜಿಲ್ಲೆಗಳಲ್ಲಿ ಜವರಾಯ ಅಟ್ಟಹಾಸ ಮೇರೆದಿದ್ದಾನೆ. ಎಲೇಲ್ಲಿ ಎಷ್ಟು‌ಅಪಘಾತ, ಜೀವ‌ಕಳೆದ ಕೊಂಡವರು ಎಷ್ಟು‌ ಅದರ ಕಂಪ್ಲೀಟ್ ವಿವರ ಇಲ್ಲಿದೆ ನೋಡಿ

ಹುಬ್ಬಳ್ಳಿಯಲ್ಲಿ ನಡೆದ ಅಪಘಾತ !

ಹೌದು ನಿನ್ನೆ ರಾತ್ರಿ ವೇಳೆ ರಸ್ತೆ ಅಪಘಾತದಲ್ಲಿ‌ ಧಾರವಾಡ, ಹಾಸನ, ಶಿವಮೊಗ್ಗ ಮೂರು ಜಿಲ್ಲೆ ಸೇರಿ 9 ಜನ ಸಾವನಪ್ಪಿದ ಘಟನೆ ನಡೆದಿದೆ. ನಿನ್ನೆ ರಾತ್ರಿ ಮದುವೆ ಮುಗಿಸಿಕೊಂಡು ವಾಪಸ್ ಬರುವಾಗ ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಬಳಿ. ಮರಕ್ಕೆ ಕಾರು ಡಿಕ್ಕಿ ಹೊಡೆದು ಸುಶೀಲ್ ಕುಮಾರ್ ದೇಶಪಾಂಡೆ ಎನ್ನುವ ಯುವಕ ಸಾವಾಗಿದ್ದು. ಕಾರಿನಲ್ಲಿದ್ದ ಐದು ಜನರಿಗೆ ಗಂಭೀರ ಗಾಯವಾಗಿದ್ದು. ಐವರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕೆತ್ಸೆ ನೀಡಲಾಗುತ್ತಿದೆ.

ಇನ್ನು ಹುಬ್ಬಳ್ಳಿಯ ಉಣಕಲ್ಲ್ ಬಳಿ ಬೈಕ್ ಸವಾರ ರಾಹುಲ್ ಹಿರೇಮನಿ ಎಂಬ ಯುವಕ ಬೈಕ್’ನಲ್ಲಿ ಹೋಗುತ್ತಿದ್ದಾಗ ಡಿವೈಡರ್ ಗುದ್ದಿದ ಸ್ಥಳದಲ್ಲೇ ಸಾವನ್ನಪ್ಪಿದ್ದಾನ. ಮತ್ತೊಂದೆಡೆ ಧಾರವಾಡದ ಅಳ್ನಾವರ ರಸ್ತೆಯಲ್ಲಿ ಈಚರ್ ವಾಹನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದ ಘಟನೆ ನಡೆದಿದೆ0.

ಇದನ್ನೂ ಓದಿ: ಗೆಳೆಯನ ಮದುವೆ ಮುಗಿಸಿಕೊಂಡು ಬರುವಾಗ ಅಪಘಾತ : ಓರ್ವ ಸಾ*ವು !

ಶಿವಮೊಗ್ಗ

ಇನ್ನು ಶಿವಮೊಗ್ಗದಲ್ಲಿ ಸರ್ಕ್ಯೂಟ್ ಹೌಸ್ ಸರ್ಕಲ್ ಹತ್ತಿರ ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಅಪಘಾತದ ರಭಸಕ್ಕೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬ ಯುವಕನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ. ಇಬ್ಬರು ಯುವಕರ ಗುರುತು ಇನ್ನು ಪತ್ತೆಯಾಗಿಲ್ಲ.

ಹಾಸನ

ಹಾಸನದ ಹೊರವಲಯದ ದೊಡ್ಡಪುರ ಗ್ರಾಮದ ಬಳಿ ಇಂದು ಮುಂಜಾನೆ ಲಾರಿ-ಕಾರು ನಡುವೆ ಮುಖಾಮುಖಿ ಡಿಕ್ಕಿ ಕಾರಿನಲ್ಲಿದ್ದ ಚನ್ನರಾಯಪಟ್ಟಣ ತಾಲ್ಲೂಕಿನ, ಬೊಮ್ಮನಹಳ್ಳಿ ಗ್ರಾಮದ ಅಭಿಷೇಕ್ ಹಾಗೂ ತುರುವೇಕೆರೆ ಮೂಲದ ಮಂಜುನಾಥ್ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ…..

ಇದನ್ನೂ ಓದಿ : ಹಾಸ್ಟೆಲ್​ ಮಂಚಕ್ಕೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡ ಯುವತಿ !

ಮೇಲಿನ ಎಲ್ಲವು ನೆನ್ನೆಯ ಘಟನೆಯಾದರೆ ಡಿಸೆಂಬರ್​ 21 ಶನಿವಾರವು ಕೂಡ ಅನೇಕ ಅಪಘಾತ ಪ್ರಕರಣಗಳು ವರದಿಯಾಗಿದೆ.

ಬೆಂಗಳೂರಿನ ಹೊರವಲಯ ಟಿ,ಬೇಗೂರು ಬಳಿಯಲ್ಲಿ ಕಾರಿನ ಮೇಲೆ ಕ್ಯಾಂಟರ್​ ಬಿದ್ದು ಒಂದೆ ಕುಟುಂಬದ 6ಜನ ಸಾವನ್ನಪ್ಪಿದ್ದು. ಮಂಡ್ಯದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತವಾಗಿ 6 ಜನರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ತಂದೆಯೊಂದಿಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಅಪಘಾತದಲ್ಲಿ ಸಾವನ್ನಪ್ಪಿದ್ದಳು.

ಒಟ್ಟಿನಲ್ಲಿ ಡಿಸೆಂಬರ್ ಕೊನೆ ದಿನಗಳಲ್ಲಿ ಜವರಾಯ ಅಟ್ಟಹಾಸ ಮೆರೆಯುತ್ತಿದ್ದು. ರಸ್ತೆ ಪ್ರಯಾಣ ಸಮಯದಲ್ಲಿ ವಾಹನ ಸವಾರರು ಜಾಗೃತರಾಗಿ ವಾಹನ ಚಾಲನೆ ಮಾಡಿ ಸುರಕ್ಷಿತ ಪ್ರಯಾಣ ಮಾಡಬೇಕೆನ್ನುವುದೇ ನಮ್ಮ ಪವರ ಟಿವಿ ಕಳಕಳಿ.

 

RELATED ARTICLES

Related Articles

TRENDING ARTICLES