ಹಾಸನ : ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಹಾಸನದ ಹೊರವಲಯದಲ್ಲಿ ನಡೆದಿದ್ದು. ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನ ಹೊರವಲಯದ ದೊಡ್ಡಪುರ ಗ್ರಾಮದ ಬಳಿ ಇಂದು ಮುಂಜಾನೆ ಘಟನೆ ನಡೆದಿದ್ದು. ಹಾಸನಕ್ಕೆ ಬಂದಿದ್ದ ಯುವಕರು ಅರಸೀಕೆರೆಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ. KA-22-D-2077 ನಂಬರ್‌ನ ಲಾರಿ ಡಿಕ್ಕಿ ಹೊಡೆದು ದುರ್ಘಟನೆ ಘಟಿಸಿದ್ದು. ಚನ್ನರಾಯಪಟ್ಟಣ ತಾಲ್ಲೂಕಿ, ಬೊಮ್ಮನಹಳ್ಳಿ ಗ್ರಾಮದ 32 ವರ್ಷದ ಅಭಿಷೇಕ್ ಹಾಗೂ ತುರವೇಕೆರೆ ಮೂಲದ ಮಂಜುನಾಥ್ ಸಾವನ್ನಪ್ಪಿದ್ದಾರೆ.
ಇದನ್ನೂ ಓಧಿ :ಕುರ್-ಕುರೇ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ : 10 ಜನ ಆಸ್ಪತ್ರೆಗೆ ದಾಖಲು !
ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ.