Monday, December 23, 2024

ಪರೀಕ್ಷೆ ಮುಂದೂಡಲು ಶಾಲೆಗೆ ಬಾಂಬ್​​ ಬೆದರಿಕೆ ಹಾಕಿದ ವಿದ್ಯಾರ್ಥಿಗಳು!

ನವದೆಹಲಿ: ದೆಹಲಿಯ ಕನಿಷ್ಠ ಮೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಆ ಶಾಲೆಯ  ವಿದ್ಯಾರ್ಥಿಗಳೇ ಕಳುಹಿಸಿದ್ದಾರೆ ಎಂದು ದೆಹಲಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಪಡೆಯ ಆರಂಭಿಕ ತನಿಖೆಯ ನಂತರ, ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಸುದ್ದಿ ತಿಳಿಸಿದರು,

ನವೆಂಬರ್​ 28ರಂದು ರೋಹಿಣಿ ವಿಹಾರ್​ನಲ್ಲಿರುವ ವೆಂಕಟೇಶ್ವರ ಗ್ಲೋಬಲ್​ ಸ್ಕೂಲ್​ ಸೇರಿದಂತೆ ಇನ್ನು ಎರಡು ಶಾಲೆಗಳಿಗೆ ಬಾಂಬ್​ ಬೆದರಿಕೆ ಹಾಕಲಾಗಿತ್ತು. ಇದರ ಬಗ್ಗೆ ಪರಿಶೀಲನೆ ನಡೆಸಿದಾಗ ಪರೀಕ್ಷೆಗಳನ್ನು ಮುಂದೂಡಬೇಕೆಂದು ಶಾಲೆಯ ಇಬ್ಬರು ವಿದ್ಯಾರ್ಥಿಗಳು ಬೆದರಿಕೆಗಳನ್ನು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ದೆಹಲಿಯಲ್ಲಿ ಈ ಹಿಂದೆ ಅಪರಿಚಿತರು ಬಾಂಬ್ ಬೆದರಿಕೆ ಹಾಕಿದ್ದನ್ನು ಪ್ರೇರಣೆಯಾಗಿ ತೆಗೆದುಕೊಂಡು ಈ ರೀತಿ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾರೆ.

ಇದನ್ನು ತಿಳಿದ ನಂತರ ಪೊಲೀಸ್​ ಅಧಿಕಾರಿಗಳೂ ಅವರ ಪೋಷಕರಿಗೆ ಎಚ್ಚರಿಕೆ ನೀಡಿ ಅವರನ್ನು ಹೋಗಲು ಅನುಮತಿಸಲಾಯಿತು. ಅಧಿಕಾರಿಗಳ ಪ್ರಕಾರ, ರೋಹಿಣಿ ಮತ್ತು ಪಶ್ಚಿಮ ವಿಹಾರ್‌ನಲ್ಲಿರುವ ಇನ್ನೂ ಎರಡು ಶಾಲೆಗಳಿಗೆ ಅವರ ವಿದ್ಯಾರ್ಥಿಗಳು ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾರೆ.

 

RELATED ARTICLES

Related Articles

TRENDING ARTICLES