Thursday, January 2, 2025

ಕಾರು-ಲಾರಿ ನಡುವೆ ಮುಖಾಮುಖಿ ಡಿಕ್ಕಿ : ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೆ ಸಾ*ವು !

ಮಂಡ್ಯ : ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು. ಭೀಕರ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು. ಓರ್ವ ವಿಧ್ಯಾರ್ಥಿಗೆ ತೀವ್ರ ಗಾಯವಾಗಿದ್ದು. ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಬೋಸೇಗೌಡನದೊಡ್ಡಿಯ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು. ತಲಕಾಡಿಗೆ ಪ್ರವಾಸಕ್ಕೆ ಹೋಗುತ್ತಿದ್ದ ವಿಧ್ಯಾರ್ಥಿಗಳು KSRTC  ಬಸ್​​ನ್ನು ಹಿಂದಿಕ್ಕೂವ ಭರದಲ್ಲಿ ಎದುರಿಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.

ಮೃತರನ್ನು ಪ್ರಣವ್, ಆಕಾಶ್, ಆದರ್ಶ್ ಎಂದು ಗುರುತಿಸಿದ್ದು. ಪೃಥ್ವಿ ಎಂಬಾತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಎಲ್ಲಾ ವಿಧ್ಯಾರ್ಥಿಗಳು ಬೆಂಗಳೂರಿನ ಐಐಟಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದರು. ಮೃತರ ಶವವನ್ನು ಮಳವಳ್ಳಿಯ ಶವಗಾರಕ್ಕೆ ಶಿಫ್ಟ್​ ಮಾಡಿದ್ದು. ಗಾಯಾಳು ಪೃಥ್ವಿಯನ್ನು ಮಳವಳ್ಳಿ ಸಾರ್ವಜನಿಕರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES